ರಾಷ್ಟ್ರೀಯ

ಜಯಲಲಿತಾ ಸ್ಮಾರಕದ ಬಳಿ ಭದ್ರತಾ ಸಿಬ್ಬಂದಿ ಆತ್ಮಹತ್ಯೆ

Pinterest LinkedIn Tumblr


ಚೆನ್ನೈ: ಜಯಲಲಿತಾ ಸ್ಮಾರಕಕ್ಕೆ ಭದ್ರತೆಗೆಂದು ನಿಯೋಜನೆಗೊಂಡಿದ್ದ ಪೊಲೀಸ್‌ ಪೇದೆ ಸ್ಥಳದಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧುರೈ ಮೂಲದ ಅರುಲ್‌ ರಾಜ್‌ ಸಾವಿಗೆ ಶರಣಾದವರು.

ಮೃತ ಅರುಲ್‌ ಗ್ರೇಟರ್‌ ಚೆನ್ನೈ ಸಿಟಿ ಪೊಲೀಸ್‌ನ ಶಸ್ತ್ರಾಸ್ತ್ರ ಪಡೆಯ ಪೇದೆ. ಮರೀನಾ ಬೀಚ್‌‌ನಲ್ಲಿರುವ ಜಯಲಲಿತಾ ಸ್ಮಾರಕದ ಭದ್ರತೆಗೆ ನಿಯೋಜನೆಗೊಂಡಿದ್ದವರ ಪೈಕಿ ಅರುಲ್‌ ಕೂಡ ಒಬ್ಬರು. ಬೆಳಗ್ಗೆ ಸ್ಮಾರಕದಲ್ಲಿ ಕರ್ತವ್ಯಕ್ಕೆ ಬಂದಿದ್ದ ಅರುಲ್‌ ಏಕಾ ಏಕಿ ತನ್ನ ಸರ್ವೀಸ್‌ ಬಂದೂಕಿನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಸ್ಥಳದಲ್ಲೇ ಕುಸಿದು ಬಿದ್ದಿದ್ದು, ತಕ್ಷಣವೇ ನಗರದ ರಾಜೀವ್‌ ಗಾಂಧಿ ಸರಕಾರಿ ಜನರಲ್‌ ಆಸ್ಪತ್ರೆಗೆ ರವಾನಿಸ ಲಾಗಿದೆ. ಆದರೆ, ಅಷ್ಟರಲ್ಲೇ ಪೇದೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿ ದ್ದಾರೆ.

ಈ ಘಟನೆಯಿಂದ ಸಾರ್ವಜನಿಕರು ಸೇರಿದಂತೆ ಪೊಲೀಸ್‌ ಸಿಬ್ಬಂದಿ ಕೂಡ ಆಘಾತಕ್ಕೀಡಾ ಗಿದ್ದಾರೆ. ಪೇದೆ ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಪ್ರಕರಣ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಪೊಲೀಸ್‌ ಆಯುಕ್ತ ಎ.ಕೆ.ವಿಶ್ವನಾಥನ್‌‌ ಮತ್ತಿತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರೀನಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.