ಕರ್ನಾಟಕ

ಉತ್ತರ ಪ್ರದೇಶದ ವ್ಯಕ್ತಿಯಿಂದ ಕನ್ನಡಿಗನ ಮೇಲೆ ಹಲ್ಲೆ

Pinterest LinkedIn Tumblr


ಬೆಂಗಳೂರು: ಕರ್ತವ್ಯ ನಿಷ್ಠೆ ತೋರಿದ ಸೆಕ್ಯುರಿಟಿ ಗಾರ್ಡ್​ ಮೇಲಿನ ಹಲ್ಲೆ ಪ್ರಕರಣ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ಉತ್ತರಪ್ರದೇಶದ ವ್ಯಕ್ತಿಯೊಬ್ಬ ಕನ್ನಡಿಗನ ಮೇಲೆ ಹಲ್ಲೆ ನಡೆಸಿರುವ ವಿಷಯ ತಡವಾಗಿ ಹೊರಬಂದಿದೆ.

ಹಲ್ಲೆಗೊಳಗಾದ ಇಮ್ರಾನ್ ಖಾನ್​​ ಫೆ. 25(ಭಾನುವಾರ)ರಂದು ಲಾಲ್​ಬಾಗ್​ನಲ್ಲಿ ನಡೆದ ಘಟನೆಯ ಕುರಿತು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದು, ಕನ್ನಡಿಗನ ಮೇಲೆ ಹಲ್ಲೆ ನಡೆಯುತ್ತಿದ್ದರೂ ಸಾರ್ವಜನಿಕರು ಸಹಾಯಕ್ಕೆ ಬಾರದಿರುವ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

ಏನಿದು ಪ್ರಕರಣ?

ನೀರಿನ ಬಳಿ ಆಡಲು ಹೋಗುತ್ತಿದ್ದ ಉತ್ತರಪ್ರದೇಶ ಮೂಲದ ಮಗುವನ್ನು ತಡೆದ ಕಾರಣ, ಸೆಕ್ಯುರಿಟಿಯ ಮೇಲೆ ಮಗುವಿನ ಕುಟುಂಬದವರು ಹಲ್ಲೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಪೊಲೀಸರು, ಪ್ರಕರಣದ ಕುರಿತು ವಿಚಾರಿಸಲು ಆರಂಭಿಸಿದರು. ಸಾರ್ವಜನಿಕರಲ್ಲಿ ಯಾರು ಮುಂದೆ ಬಂದು ಈ ವಿಷಯ ಹೇಳದಿದ್ದಾ, ನಾನು ಪೊಲೀಸರಿಗೆ ಪ್ರಕರಣದ ಕುರಿತು ಮಾಹಿತಿ ನೀಡಿದೆ. ಆದರೆ ಅದೇ ಕುಟುಂಬದ ವ್ಯಕ್ತಿಯೊಬ್ಬ ಪೊಲೀಸರು ಸ್ಥಳದಿಂದ ಹೋದ ತಕ್ಷಣ ನನ್ನ ಮೇಲೆ ಏಕಾಏಕಿ ಎರಗಿ ಮಾರಣಾಂತಿಕ ಹಲ್ಲೆ ನಡೆಸಿದರು ಎಂದು ಘಟನೆ ಕುರಿತು ಫೇಸ್​ಬುಕ್​ನಲ್ಲಿ ವಿವರಿಸಿದ್ದಾರೆ.

ಘಟನೆ ತಾರಕಕ್ಕೇರುತ್ತಿದ್ದಂತೆ ಉತ್ತರಪ್ರದೇಶ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

Comments are closed.