ಅಂತರಾಷ್ಟ್ರೀಯ

ಈತ 24ನೇ ಮಹಡಿಯಿಂದ ಬಿದ್ದರೂ ಬದುಕುಳಿದ !

Pinterest LinkedIn Tumblr

ಸಾಹಸ ಯಾತ್ರೆ ಮಾಡುವುದು ಮತ್ತು ಅವುಗಳನ್ನು ಚಿತ್ರೀಕರಿಸಿ ಸಾಮಾಜಿಕ ತಾಣಗಳಲ್ಲಿ ಪ್ರದರ್ಶಿಸಿ ಪ್ರಚಾರ ಪಡೆಯುವ ಟ್ರೆಂಡ್ ಹೆಚ್ಚಾಗುತ್ತಿದೆ. ಸ್ವೀಡನ್​ನಲ್ಲಿ ವ್ಯಕ್ತಿಯೋರ್ವ 24 ಅಂತಸ್ತು ಹೊಂದಿರುವ 246 ಅಡಿ ಎತ್ತರದ ಕಟ್ಟಡದಿಂದ ಬೇಸ್ ಜಂಪ್ ಮಾಡಲು ಹೋಗಿ, ಪ್ಯಾರಾಚೂಟ್ ತೆರೆದುಕೊಳ್ಳದೆ ನೆಲಕ್ಕೆ ಬಿದ್ದರೂ, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಭಾನುವಾರ ಸ್ವೀಡನ್​ನ ಸ್ಟಾಕ್​ಹೋಂ ಸಮೀಪದ ಕುಂಗ್​ಶೋಲ್ಮೆನ್ ಪ್ರಾಂತ್ಯದಲ್ಲಿ ಈ ಪ್ರಕರಣ ವರದಿಯಾಗಿದೆ. ಬಹುಮಹಡಿ ಕಟ್ಟಡ ಏರಿದ ಹವ್ಯಾಸಿ ಬೇಸ್ ಜಂಪರ್, ಪ್ಯಾರಾಚೂಟ್ ಕಟ್ಟಿಕೊಂಡು 24ನೇ ಮಹಡಿ ಮೇಲಿಂದ ಕೆಳಕ್ಕೆ ಜಿಗಿದಿದ್ದಾನೆ. ಆತನ ಗೆಳೆಯ ಕೆಳಗಡೆ ನಿಂತು ವಿಡಿಯೋ ಚಿತ್ರಿಸುತ್ತಿದ್ದ. ಕೆಳಕ್ಕೆ ಬೀಳುತ್ತಿರುವಾಗ ಪ್ಯಾರಾಚೂಟ್ ತೆರೆದುಕೊಂಡಿಲ್ಲ. ಹೀಗಾಗಿ ಕೆಲವೇ ಸೆಕೆಂಡ್​ನಲ್ಲಿ ಆತ ನೆಲಕ್ಕೆ ಬಿದ್ದಿದ್ದಾನೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಬೇಸ್ ಜಂಪರ್​ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಗಗನಚುಂಬಿ ಕಟ್ಟಡದ ಮೇಲಿನಿಂದ ಕೆಳಕ್ಕೆ ಜಂಪ್ ಮಾಡುತ್ತಿರುವ ವ್ಯಕ್ತಿಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

Comments are closed.