ಅಂತರಾಷ್ಟ್ರೀಯ

ಭಾರೀ ಸುದ್ದಿಯಲ್ಲಿರುವ ಬಣ್ಣದ ಬೆಕ್ಕನ್ನೊಮ್ಮೆ ನೋಡಿ…

Pinterest LinkedIn Tumblr

ಸಾಕುಪ್ರಾಣಿಗಳು ಅವುಗಳ ತಳಿ, ವಿಶೇಷತೆ, ವಿರಳತೆ ಕಾರಣಗಳಿಂದಾಗಿ ಹೆಚ್ಚು ಗಮನ ಸೆಳೆಯುತ್ತವೆ. ಬೆಕ್ಕುಗಳು ಅವುಗಳ ಕಣ್ಣು, ಬಣ್ಣದ ಕಾರಣದಿಂದಾಗಿ ಆಕರ್ಷಕವಾಗಿ ತೋರುತ್ತವೆ. ಆದರೆ, ಫ್ರಾನ್ಸ್​ನಲ್ಲಿರುವ ಬೆಕ್ಕೊಂದು ತನ್ನ ಮುಖದ ಕಾರಣದಿಂದಾಗಿ ಭಾರಿ ಸುದ್ದಿಯಲ್ಲಿದೆ.

ದೇಹವಿಡೀ ಕಪ್ಪು ಕೂದಲನ್ನು ಹೊಂದಿದ್ದರೂ ಮುಖದ ಭಾಗದಲ್ಲಿ ಎರಡು ಬಣ್ಣಗಳನ್ನು ಹೊಂದಿದೆ. ಬೂದು ಹಾಗು ಕಪ್ಪು ಬಣ್ಣ ಎರಡೂ ಭಾಗದಲ್ಲೂ ಕರಾರುವಕ್ಕಾಗಿ ಹರಡಿಕೊಂಡಿರುವುದು ವಿಶೇಷವಾಗಿ ಗಮನಸೆಳೆಯುತ್ತದೆ. ಬ್ರಿಟಿಷ್ ತಳಿಯ, ಪುಟ್ಟ ರೋಮ ಹೊಂದಿರುವ ಬೆಕ್ಕಿಗೆ ಹುಟ್ಟಿದಾಗಲೇ ಮುಖದಲ್ಲಿ ಎರಡು ಬಣ್ಣಗಳಿದ್ದವು. ಬೆಳೆಯುತ್ತ ಹೋದಂತೆ ಅದು ಸುಂದರ ರೂಪ ಪಡೆದಿದೆ. ಆರಂಭದಲ್ಲಿ ಬೆಕ್ಕಿನ ಫೋಟೋವನ್ನು ಸಾಮಾಜಿಕ ತಾಣಗಳಲ್ಲಿ ನೋಡಿದವರು ಅದೊಂದು ಫೋಟೋಶಾಪ್ ಸೃಷ್ಟಿ, ನಕಲಿ ಚಿತ್ರ ಎಂದೆಲ್ಲ ಹೇಳಿದ್ದರು. ಬೆಕ್ಕಿಗೆ ನಾರ್ನಿಯಾ ಎಂದು ಹೆಸರಿಸಲಾಗಿದೆ. ಇತ್ತೀಚೆಗೆ ವೃತ್ತಿಪರ ಪ್ರಾಣಿಗಳ ಫೋಟೋಗ್ರಾಫರ್ ಜೀನ್ ಮೈಖೆಲ್ ಲಾಬಟ್ ಸ್ವತಃ ಬೆಕ್ಕಿನ ಚಿತ್ರ ಸೆರೆಹಿಡಿದು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ನಂತರದಲ್ಲಿ ಜನರು ಅದನ್ನು ನಂಬುವಂತಾಗಿದೆ. 2017ರ ಮಾರ್ಚ್

ನಲ್ಲಿ ನಾರ್ನಿಯಾ ಜನಿಸಿದ್ದು, ಅದರ ನೀಲಿ ಕಣ್ಣುಗಳು ಆಕರ್ಷಕವಾಗಿ ಕಾಣಿಸುತ್ತಿವೆ. ಜತೆಗೆ ಮುಖದಲ್ಲಿನ ಎರಡು ಬಣ್ಣಗಳು ಜನರ ಆಕರ್ಷಣೆಗೆ ಕಾರಣವಾಗಿವೆ.

Comments are closed.