ಬೀಜಿಂಗ್: ಬೌದ್ಧ ಧರ್ಮ ಸಂಸ್ಥಾಪಕ ಗೌತಮ ಬುದ್ಧ ಚೀನಾ ಮೂಲದವನು ಎಂಬುದಕ್ಕೆ ಹಲವಾರು ಸಾಕ್ಷ್ಯಾಧಾರಗಳು ಇವೆ ಎಂದು ನೇಪಾಳಿ ಪಂಡಿತರೊಬ್ಬರು ಹೇಳಿದ್ದಾರೆ.
ನೇಪಾಳಿ ಪಂಡಿತ ಅಮುಹ್ಯಾನ್ಸನ್, ಶಖ್ಯಮುನಿ (ಬುದ್ಧ) ಚೀನಾ ಮೂಲದವನಾಗಿದ್ದು, ಭಾರತೀಯನಲ್ಲ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಜನವರಿ ಒಂದರಿಂದ ಚೀನಾದ್ಯಂತ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಬುದ್ಧ ಭಾರತೀಯನಲ್ಲ ಎಂಬುದಕ್ಕೆ ಹತ್ತು ಕಾರಣಗಳನ್ನು ನೀಡಿರುವ ಅವರು, ಬುದ್ಧ ಹುಟ್ಟಿರುವ ಲುಂಬಿಣಿ, ಪುರಾತನ ಚೀನಾ ಸಾಮ್ರಾಜ್ಯದ ವಿಶೇಷ ಅಲ್ಲದೇ ಬೌದ್ಧ ಧರ್ಮದ ಪವಿತ್ರ ಗ್ರಂಥದ ಉಲ್ಲೇಖಗಳು ಮಧ್ಯ ಚೀನಾದ ಸಂಸ್ಕೃತಿಯನ್ನು ಹೋಲುತ್ತದೆ ಎಂದು ಹೇಳಿದ್ದಾರೆ.