ದೆಹಲಿ: ವಾರದ ಮಟ್ಟಿಗೆ ಭಾರತ ಭೇಟಿಯಲ್ಲಿರುವ ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡು ದೇಶದ ಪ್ರಮುಖ ಪ್ರದೇಶಗಳಿಗೆ ಭೇಟಿ ನೀಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿವೆ.
ಟ್ರುಡು ಹಾಗು ಅವರ ಪತ್ನಿ ಸೋಫಿ ಟ್ರುಡು ದೆಹಲಿಯಲ್ಲಿ ಪಾಲ್ಗೊಳ್ಳಬೇಕಿದ್ದ ಔತಣಕೂಟವೊಂದರಲ್ಲಿ ಖಾಲಿಸ್ತಾನೀ ಭಯೋತ್ಪಾದಕ ಜಸ್ಪಾಲ್ ಅತ್ವಾಲ್‌ಗೂ ಆಹ್ವಾನ ನೀಡಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
ಟ್ರುಡು ದಂಪತಿಯಲ್ಲದೇ ಕೆನಡಾ ಮೂಲಸೌಕರ್ಯ ಹಾಗು ಸಮುದಾಯಗಳ ಸಚಿವ ಅಮರ್ಜೀತ್ ಸೊಹಿ ಕೂಡಾ ಅತ್ವಾಲ್‌ನೊಂದಿಗೆ ಛಾಯಾಚಿತ್ರ ತೆಗೆದಿಕೊಂಡಿರುವುದು ತಿಳಿದುಬಂದಿದೆ.
ಫೆಬ್ರವರಿ 22ರಂದು ದೆಹಲಿಯ ಕೆನಡಾ ಹೌಸ್‌ನಲ್ಲಿ ಏರ್ಪಡಿಸಿದ್ದ ಔತಣಕೂಟವನ್ನು ವಿವಾದದ ಕಾರಣ ರದ್ದು ಪಡಿಸಲಾಗಿದೆ.ಕೂಟದಲ್ಲಿ ಪಾಲ್ಗೊಳ್ಳಲು ಕೆನಡಾದ ಭಾರತದ ಹೈಕಮಿಷನರ್ ನಾದಿರ್ ಪಟೇಲ್ ಆಹ್ವಾನ ನೀಡಿದ್ದರು.
ಅಂತಾರಾಷ್ಟ್ರೀಯ ಸಿಖ್ ಯುವಕರ ಪ್ರತಿಷ್ಠಾನ ಎಂಬ ನಿಷೇಧಿತ ಭಯೋತ್ಪಾದಕ ಸಂಘಟನೆಯಲ್ಲಿ ಜಸ್ಪಾಲ್ ಅತ್ವಾಲ್ ಸಕ್ರಿಯರಾಗಿದ್ದರು. 1986ರಲ್ಲಿ ವಾಂಕುವರ್ ದ್ವೀಪದಲ್ಲಿ ಭಾರತದ ಸಚಿವ ಮಲ್ಕಯಾತ್ ಸಿಂಗ್ ಸಿಧುರ ಹತ್ಯೆಗೆ ಜಸ್ಪಾಲ್ ಸಂಚು ರೂಪಿಸಿದ್ದ. ಸಿಧುರ ಕಾರನ್ನು ಮುತ್ತಿಗೆ ಗುಂಡು ಹಾರಿಸಿ ಅತ್ವಾಲ್‌ರನ್ನು ಕೊಲ್ಲಲು ಸಂಚು ರೂಪಿಸಿದ್ದ ನಾಲ್ವರಲ್ಲಿ ಅತ್ವಾಲ್ ಕೂಡಾ ಒಬ್ಬರಾಗಿದ್ದಾರೆ.
46 ವರ್ಷದ ಟ್ರುಡು ಶನಿವಾರದಂದು ಭಾರತಕ್ಕೆ ಆಗಮಿಸಿದ್ದು ಗುಜರಾತ್‌ನ ಸಬರಮತಿ ಆಶ್ರಮಕ್ಕೆ ಭೇಟಿಯಿತ್ತಿದ್ದಾರೆ.