ಅಂತರಾಷ್ಟ್ರೀಯ

23 ಈಜುಕೊಳವಿರುವ ಈ ಹಡಗಿನಲ್ಲಿ ಏನಿದೆ-ಏನಿಲ್ಲ ನೋಡಿ…!

Pinterest LinkedIn Tumblr

ನೌಕಾಯಾನದ ಬಗ್ಗೆ ವಿದೇಶಿಗರಿಗೆ ಅತೀವ ಕುತೂಹಲ. ಜತೆಗೆ ಐಷಾರಾಮಿ ಬದುಕನ್ನೂ ಅವರು ಬಯಸುತ್ತಾರೆ. ಹೀಗಾಗಿ ವಿದೇಶಿ ಸಂಸ್ಥೆಗಳು ದೈತ್ಯಾಕಾರದ ಹಡಗುಗಳನ್ನು ನಿರ್ವಿುಸುವುದರಲ್ಲಿ ಪೈಪೋಟಿಗೆ ಬಿದ್ದಂತಿವೆ. ಬ್ರಿಟನ್​ನ ನೌಕಾಯಾನ ಸಂಸ್ಥೆ ‘ರಾಯಲ್ ಕೆರಿಬಿಯನ್’ ಜಗತ್ತಿನ ಅತಿ ದೊಡ್ಡ ಪ್ರವಾಸಿ ಹಡಗು (ಕ್ರೂಸ್​ಶಿಪ್) ಸಿದ್ಧಪಡಿಸುತ್ತಿದೆ. ‘ಸಿಂಫೋನಿ ಆಫ್ ದಿ ಸೀಸ್’ ಹೆಸರಿನ ಕ್ರೂಸ್ ಹಡಗು, 18 ಡೆಕ್​ಗಳನ್ನು ಹೊಂದಿದೆ. 959 ಮಿಲಿಯನ್ ಬ್ರಿಟನ್ ಪೌಂಡ್ ವೆಚ್ಚದಲ್ಲಿ (ಅಂದಾಜು 86,79,07,16,203 ರೂ.) ನಿರ್ವಣವಾಗುತ್ತಿರುವ ಈ ಹಡಗು ಮಾರ್ಚ್​ನಲ್ಲಿ ಸಿದ್ಧವಾಗಿ ಮೊದಲ ಪ್ರಯಾಣ ಕೈಗೊಳ್ಳಲಿದೆ.

8,000 ಜನರಿಗೆ ಆರಾಮವಾಗಿ ತಂಗಲು ಅವಕಾಶವಿದ್ದು, ಹಡಗು 1,188 ಅಡಿ ಉದ್ದವಿದೆ. ಒಟ್ಟು 2,28,081 ಟನ್ ತೂಕವಿದ್ದು, ನಿರ್ಮಾಣ ಪೂರ್ತಿಯಾದ ಬಳಿಕ ಇನ್ನಷ್ಟು ಭಾರವಾಗಲಿದೆ. ಫ್ರಾನ್ಸ್​ನ ಸೇಂಟ್ ನಾಝಿರೆ ಶಿಪ್​ಯಾರ್ಡ್​ನಲ್ಲಿ ಹಡಗು ನಿರ್ವಣವಾಗುತ್ತಿದ್ದು, 20 ರೆಸ್ಟೋರೆಂಟ್​ಗಳು, 6 ಬಾರ್​ಗಳು, ವಿವಿಧ ಗೇಮ್ ಮಿನಿ ಗಾಲ್ಪ್ ಕೋರ್ಸ್, ಬಾಸ್ಕೆಟ್​ಬಾಲ್ ಅಂಕಣ, ಬೃಹತ್ ಥಿಯೇಟರ್ ಸಹಿತ ಹಲವು ಸೌಲಭ್ಯಗಳನ್ನು ಹೊಂದಿದೆ. ವಿಶೇಷವೆಂದರೆ ಈ ಹಡಗಿನಲ್ಲಿ 23 ಈಜುಕೊಳಗಳಿವೆ. ಹಲವು ವಾಟರ್ ಸ್ಲೆೈಡ್​ಗಳಿದ್ದು, ಈ ಪೈಕಿ ಒಂದು 100 ಅಡಿ ಎತ್ತರವಿದ್ದು, ಹಡಗಿನಲ್ಲಿರುವ ಅತಿ ಎತ್ತರದ ವಾಟರ್ ಸ್ಲೆೈಡ್ ಎನಿಸಿದೆ.

Comments are closed.