ಅಂತರಾಷ್ಟ್ರೀಯ

ಇದ್ದ ಮೆನಯನ್ನೇ ಮಾರಿ ವಾಹನವನ್ನೇ ಮನೆ ಮಾಡಿಕೊಂಡು ಊರೂರು ಸುತ್ತಾಡುತ್ತಿರುವ ದಂಪತಿ !

Pinterest LinkedIn Tumblr

ಜನರು ಏನೇನೋ ಮಾಡಿ ಸುದ್ದಿಯಾಗುತ್ತಾರೆ. ಅಮೆರಿಕದ ದಂಪತಿ ಮನೆ, ಆಸ್ತಿ ಮಾರಿ ವಾಹನವನ್ನೇ ಮನೆ ಮಾಡಿಕೊಂಡು ಸುದ್ದಿಯಾಗಿದ್ದಾರೆ.

ನಾರ್ಥ್ ಕೆರೋಲಿನಾದ ನಿವಾಸಿಯಾಗಿದ್ದ ಅಲೆಕ್ಸಿಸ್ ಸ್ಟೀಫನ್ಸ್ ಮತ್ತು ಕ್ರಿಶ್ಚಿಯನ್ ಪಾರ್ಸನ್​ಗೆ ಇರುವ ಸಣ್ಣ ಜೀವನವನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂಬ ಹಂಬಲವಂತೆ. ಇದಕ್ಕಾಗಿ, ಎರಡೂವರೆ ವರ್ಷಗಳ ಹಿಂದೆ ನಾರ್ಥ್ ಕೆರೋಲಿನಾದಲ್ಲಿದ್ದ ತಮ್ಮಮನೆ ಮಾರಿ ಗಾಡಿಯನ್ನೇ ಮನೆಯನ್ನಾಗಿ ಬದಲಾಯಿಸಿಕೊಂಡು 45,000 ಮೈಲು ಪ್ರಯಾಣಿಸಿದ್ದಾರೆ.

ಅಮೆರಿಕದ 36 ರಾಜ್ಯಗಳು ಮತ್ತು ಕೆನಡಾದ ಒಂದು ಪ್ರಾಂತ್ಯವನ್ನು ಸುತ್ತಿದ್ದಾರೆ. ವಾಹನದಲ್ಲೇ ಬೆಡ್ ರೂಂ, ಅಡುಗೆ ಕೋಣೆ, ನೀರಿನ ಟ್ಯಾಂಕ್ ಶೌಚಗೃಹ ಮತ್ತು ಬಾತ್​ರೂಂ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ನಾರ್ಥ್ ಕೆರೋಲಿನಾದಲ್ಲಿದ್ದ ತಮ್ಮ ನಿವಾಸವನ್ನು 2.20 ಕೋಟಿ ರೂ.ಗಳಿಗೆ ಮಾರಾಟ ಮಾಡಿದ ಅವರು, 30.65 ಲಕ್ಷ ರೂ.ಗಳಲ್ಲಿ ಸಂಚಾರಿ ಮನೆ ನಿರ್ವಿುಸಿದ್ದಾರೆ.

ತಮ್ಮ ಈ ಅದ್ಭುತ ಪ್ರಯಾಣವನ್ನು ಸದುಪಯೋಗ ಪಡಿಸಿಕೊಳ್ಳುವ ಉದ್ದೇಶದಿಂದ ಸಾಕ್ಷ್ಯಚಿತ್ರಗಳನ್ನು ನಿರ್ವಿುಸುತ್ತಿದ್ದಾರೆ. ತಾವು ಪ್ರಯಾಣಿಸುವ ಪ್ರದೇಶಗಳ ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆಯೂ ಸಾಕ್ಷ್ಯಚಿತ್ರಗಳನ್ನು ತಯಾರಿಸಿದ್ದಾರೆ. ಇವರ ಪ್ರಯಾಣ ಎಷ್ಟೋ ಜನರಿಗೆ ಸ್ಪೂರ್ತಿ ತುಂಬುತ್ತಿದ್ದು, ಇಂತಹ ಮನೆಗಳ ನಿರ್ವಣಕ್ಕೆ ಬೇಡಿಕೆಯೂ ಬರುತ್ತಿದೆಯಂತೆ.

Comments are closed.