ಅಂತರಾಷ್ಟ್ರೀಯ

ಇರಾನ್‌ ಪ್ರಯಾಣಿಕರ ವಿಮಾನ ಪತನ: 66 ಮಂದಿ ಸಾವು

Pinterest LinkedIn Tumblr

ತೆಹ್ರಾನ್‌: ಇರಾನ್‌ ದಕ್ಷಿಣ ಭಾಗದ ಪರ್ವತ ಪ್ರದೇಶದಲ್ಲಿ ಭಾನುವಾರ 66 ಪ್ರಯಾಣಿಕರಿದ್ದ ವಿಮಾನ ಪತನಗೊಂಡಿರುವುದಾಗಿ ಅಲ್ಲಿನ ಮಾಧ್ಯಮ ಸಂಸ್ಥೆ ಫಾರ್ಸ್‌ ನ್ಯೂಸ್‌ ವರದಿ ಮಾಡಿದೆ.

ಇರಾನ್‌ನ ಅಸೆಮಾನ್‌ ಏರ್‌ಲೈನ್ಸ್‌ನ ಎಟಿಆರ್‌–72 ವಿಮಾನವು ರಾಜಧಾನಿ ತೆಹ್ರಾನ್‌ನಿಂದ ಯಜೂಜ್‌ ಪಟ್ಟಣದ ಮಾರ್ಗ ಮಧ್ಯೆ ವಿಮಾನ ಪತನಗೊಂಡಿರುವುದಾಗಿ ವರದಿಯಾಗಿದೆ.

ವಿಮಾನದಲ್ಲಿ ಒಂದು ಮಗು ಸೇರಿ 60 ಪ್ರಯಾಣಿಕರು ಹಾಗೂ ಆರು ಮಂದಿ ವಿಮಾನದ ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ತೆಹ್ರಾನ್‌ನಿಂದ 480 ಕಿ.ಮೀ. ದೂರದ ಸೆಮಿರೊಮ್‌ ವಲಯದಲ್ಲಿ ವಿಮಾನ ಪತನವಾಗಿದೆ. ವಿಮಾನದಲ್ಲಿದ್ದ ಎಲ್ಲರೂ ಮೃತ ಪಟ್ಟಿರುವುದಾಗಿ ಅಸೆಮಾನ್‌ ವಿಮಾನ ಸಂಸ್ಥೆಯ ಸಾರ್ವಜನಿಕ ಸಂಪರ್ಕ ನಿರ್ದೇಶಕರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಪರ್ವತ ಪ್ರದೇಶವಾಗಿರುವ ಕಾರಣದಿಂದ ಆ್ಯಂಬುಲೆನ್ಸ್‌ಗಳನ್ನೂ ಕಳುಹಿಸಲೂ ಸಾಧ್ಯವಾಗಿಲ್ಲ. ಇರಾನ್‌ ರೆಡ್‌ ಕ್ರೆಸೆಂಟ್‌ನ 12 ರಕ್ಷಣಾ ತಂಡಗಳು ಸ್ಥಳಕ್ಕೆ ತೆರಳಿವೆ.

Comments are closed.