ಕರಾವಳಿ

ಬಾರ್ಕೂರು ಏಕನಾಥೇಶ್ವರೀ ದೇವಳಕ್ಕೆ ‘ಹಸಿರು ವಾಣಿ ಹೊರೆಕಾಣಿಕೆ’

Pinterest LinkedIn Tumblr

ಕುಂದಾಪುರ: ದೇವಾಡಿಗ ಸಮುದಾಯದ ಶ್ರೀ ಏಕನಾಥೇಶ್ವರೀ ದೇವಸ್ಥಾನವು ಬಾರ್ಕೂರಿನಲ್ಲಿ ನಿರ್ಮಾಣಗೊಂಡಿದೆ. ಶ್ರೀ ಏಕನಾಥೇಶ್ವರೀ ದೇವಿಯ ಪ್ರತಿಷ್ಟಾಪನೆ ಹಾಗೂ ಬ್ರಹ್ಮಕುಂಭಾಭಿಷೇಕ ಕರ್ಯಕ್ರಮವು ಫೆ.19ರಿಂದ 22ರವರೆಗೆ ಅದ್ಧೂರಿಯಾಗಿ ನಡೆಯಲಿದ್ದು ಪೂರ್ವಭಾವಿ ಸಿದ್ಧತೆಗಳು ಭರದಿಂದ ಸಾಗುತ್ತಿದೆ.

ಫೆ.15 ಶ್ರೀ ದೇವಿಯ ಬಿಂಬವನ್ನು ಮೆರವಣಿಗೆ ಮೂಲಕ ತರಲಾಗಿದ್ದು, ಅದೇ ದಿನದಂದು ಉಗ್ರಾಣ ಪೂಜೆಯು ನಡೆಯಿತು. ಫೆ.17ಸಂಜೆ ಕುಂದಾಪುರ ಹಾಗೂ ಉಡುಪಿ ಭಾಗದಿಂದ ಹಸಿರು ಹೊರೆಕಾಣಿಕೆಯನ್ನು ಬ್ರಹತ್ ಮೆರವಣಿಗೆ ಮೂಲಕ ತರಲಾಯಿತು. ಬ್ರಹ್ಮಾವರ ಗಾಂಧಿಮೈದಾನದಲ್ಲಿ ಒಗ್ಗೂಡಿದ ಎಲ್ಲರೂ ಶೋಭಾಯಾತ್ರೆ ಮೂಲಕ ದೇವಳಕ್ಕೆ ಹೊರೆಕಾಣಿಕೆ ತಂದರು. ಈ ಸಂದರ್ಭ ದೇವಸ್ಥಾನದ ನಿರ್ಮಾಣ ಸಮಿತಿ ಪದಾಧಿಕಾರಿಗಳು, ಟ್ರಸ್ಟಿಗಳು, ದೇವಾಡಿಗ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.

ಶ್ರೀ ಏಕನಾಥೇಶ್ವರಿ ದೇವಸ್ಥಾನ‌ದಲ್ಲಿ ಶನಿವಾರ ನಡೆದ ಹೊರೆಕಾಣಿಕೆ‌ ಮತ್ತು ವಿದ್ಯುತ್ ದೀಪಾಂಲಕರದ ದೇವಸ್ಥಾನದ ಡ್ರೋಣ್ ಚಿತ್ರಗಳು ಮೇಲಿನಂತಿದೆ.

ಚಿತ್ರಗಳು: ಅಮಿತ್ ತೆಕ್ಕಟ್ಟೆ

Comments are closed.