ಅಂತರಾಷ್ಟ್ರೀಯ

ದಕ್ಷಿಣ ಆಫ್ರಿಕಾ ಅಧ್ಯಕ್ಷ ಜಾಕೊಬ್‌ ಜುಮಾ ದಿಢೀರ್ ರಾಜೀನಾಮೆ

Pinterest LinkedIn Tumblr


ಜೋಹಾನ್ಸ್‌ಬರ್ಗ್‌‌: ರಾಜಕೀಯ ಬೆಳವಣಿಗೆಯಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜಾಕೊಬ್‌ ಜುಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ತತ್‌ಕ್ಷಣವೇ ನಾನು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ರಾಷ್ಟ್ರೀಯ ಮಾಧ್ಯಮಗಳ ಮುಂದೆ ಜಾಕೊಬ್‌ ಜುಮಾ ಘೋಷಿಸಿದ್ದಾರೆ. ಈ ಮೂಲಕ ಜುಮಾ ಅವರ 9 ವರ್ಷಗಳ ಅಧಿಕಾರ ಅಂತ್ಯಗೊಂಡಿದೆ.

ಅಧ್ಯಕ್ಷೀಯ ಸ್ಥಾನದ ಕುರಿತು ಆಡಳಿತಾರೂಢ ಆಫ್ರಿಕನ್‌ ನ್ಯಾಷನಲ್‌ ಕಾಂಗ್ರೆಸ್‌ (ಎಎನ್‌ಸಿ)ನಲ್ಲಿ ಬಿಕ್ಕಟ್ಟು ತಲೆದೋರಿದ್ದು, ಸಂಸತ್ತಿನಲ್ಲಿ ಜಾಕೊಬ್‌ ಜುಮಾ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಪ್ರತಿಪಕ್ಷಗಳು ಚಿಂತನೆ ನಡೆಸಿದ್ದವು. ಈ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಎರಡನೇ ಅಧಿಕಾರಾವಧಿ ಪೂರ್ಣಗೊಳ್ಳುವ ಮುನ್ನವೇ ಜಾಕೊಬ್‌ ಕಚೇರಿಯಿಂದ ಹೊರ ನಡೆದಿದ್ದಾರೆ. 2019ರ ಚುನಾವಣೆಯೊಂದಿಗೆ ಜುಮಾ ಅಧಿಕಾರಾವಧಿ ಕೊನೆಗೊಳ್ಳುತ್ತಿತ್ತು.

Comments are closed.