ಅಂತರಾಷ್ಟ್ರೀಯ

ಮದುವೆ ಮಂಟಪದಿಂದಲೇ ವರದಿ ಮಾಡಿದ ಪತ್ರಕರ್ತ

Pinterest LinkedIn Tumblr


ಪತ್ರಕರ್ತರು ಅಗತ್ಯ ಬಿದ್ದರೆ ಯುದ್ಧಭೂಮಿಯಿಂದಲೂ ನೇರ ವರದಿ ನೀಡಬೇಕಾಗುತ್ತದೆ. ವೃತ್ತಿಯನ್ನು ಬಹಳ ಗಂಭೀರವಾಗಿ ಪರಿಗಣಿಸಿರುವ ಪಾಕಿಸ್ಥಾನಿ ಟೀವಿ ಪತ್ರಕರ್ತನೊಬ್ಬರು ತಾವು ಮದುವೆಯಾಗುತ್ತಿರುವ ಜಾಗದಿಂದಲೇ ನೇರ ವರದಿ ನೀಡಿದ್ದಾರೆ. ಅವರು ತಮ್ಮ ಕರ್ತವ್ಯದ ಕರೆಗೆ ಓಗೊಟ್ಟರು ಎಂದು ನೀವು ಭಾವಿಸಬೇಕಿಲ್ಲ. ಅವರು ವರದಿ ಮಾಡಿದ್ದು ತಮ್ಮ ಮದುವೆ ಸಮಾರಂಭ ವನ್ನೇ. ಕೆಮೆರಾ ಎದುರು ಮೈಕ್‌ ಹಿಡಿದು ನಿಂತ ಅವರು “ಇದು ನನ್ನ ಜೀವನದ ಅತ್ಯಂತ ಸಂತೋಷದ ದಿನ. ನನ್ನದು ಪ್ರೇಮ ವಿವಾಹ. ನನ್ನ ಕುಟುಂಬದವರಿಗೂ ಸಂತೋಷವಾಗಿದೆ’ ಎನ್ನುತ್ತಾರೆ. ತಮ್ಮ ಪತ್ನಿ ಕಡೆಗೂ ಮೈಕ್‌ ಹಿಡಿದು ಅವರ ಅಭಿಪ್ರಾಯವನ್ನೂ ಕೇಳುತ್ತಾರೆ.

-ಉದಯವಾಣಿ

Comments are closed.