ಅಂತರಾಷ್ಟ್ರೀಯ

ರಸ್ತೆಯನ್ನೇ ಹಣಕ್ಕೆ ಮಾರಿದ ಚೀನೀ ಕಳ್ಳ!

Pinterest LinkedIn Tumblr


ಚೀನದ ಕಳ್ಳನೊಬ್ಬ “ಹೆದ್ದಾರಿ ದರೋಡೆ’ ಎಂಬ ಪದಕ್ಕೆ ಹೊಸ ಅರ್ಥ ನೀಡಿದ್ದಾನೆ. ಆತ ಹೆದ್ದಾರಿಯಲ್ಲಿ ದರೋಡೆ ಮಾಡಿಲ್ಲ. ಬದಲಾಗಿ ಹೆದ್ದಾರಿಯನ್ನೇ ಕದ್ದು ಮಾರಾಟ ಮಾಡಿದ್ದಾನೆ. ಜಿಯಾಂಗುÕ ಪ್ರಾಂತ್ಯದ ಹಳ್ಳಿಯ ಬಳಿ ಹೊಸದಾಗಿ ನಿರ್ಮಿಸಲಾಗಿದ್ದ ಹೆದ್ದಾರಿಯನ್ನು 800 ಮೀ. ಉದ್ದಕ್ಕೆ ಅಗೆಯಲಾಗಿತ್ತು. ಗ್ರಾಮಸ್ಥರು ಇದನ್ನು ಪೊಲೀಸರ ಗಮನಕ್ಕೆ ತಂದರು. ಪೊಲೀಸರು ತನಿಖೆ ನಡೆಸಲಾಗಿ ಕಳ್ಳ ಸಿಕ್ಕಿಬಿದ್ದ.

ಆತ ರಾತೋರಾತ್ರಿ ರಸ್ತೆ ಅಗೆದು ಸಿಮೆಂಟನ್ನು ಕಾರ್ಖಾನೆಯೊಂದಕ್ಕೆ ಮಾರಿದ್ದ. ಆತನನ್ನು ಬಂಧಿಸಿ ವಿಚಾರಣೆಗೊಳಡಿಸಿದಾಗ “ಆ ರಸ್ತೆಯನ್ನು ಯಾರೂ ಬಳಸುತ್ತಿರಲಿಲ್ಲ. ಅದು ದಂಡವಾಗುವ ಬದಲು ನಾನದನ್ನು ಮಾರಿ ಹಣ ಸಂಪಾದಿಸಿದೆ’ ಎಂದನಂತೆ ಭೂಪ.

-ಉದಯವಾಣಿ

Comments are closed.