ಕರಾವಳಿ

ಕಷ್ಟವಿಲ್ಲದ ಕ್ಷೇತ್ರವಿಲ್ಲ… ಕಷ್ಟ ಪಡದೆ ಯಶಸ್ಸು ಸಾಧ್ಯವಿಲ್ಲ : ಲಯನ್ಸ್ ಪ್ರಾಂತೀಯ ಸಮ್ಮೇಳನ “ಆಶೋತ್ತರ” ಕಾರ್ಯಕ್ರಮದಲ್ಲಿ ಖ್ಯಾತ ನಟಿ ವಿನಯ ಪ್ರಸಾದ್

Pinterest LinkedIn Tumblr

ಕಾರ್ಯಕ್ರಮದ 50ಕ್ಕೂ ಹೆಚ್ಚು ಚಿತ್ರಗಳನ್ನು ನೋಡಲು ನ್ಯೂಸ್ ಲಿಂಕ್ ಕ್ಲಿಕ್ ಮಾಡಿ

ಮಂಗಳೂರು : ಕಷ್ಟವಿಲ್ಲದ ಯಾವ ಕ್ಷೇತ್ರವೂ ಇಲ್ಲ…. ಅದೇ ರೀತಿ ಕಷ್ಟ ಪಡದೆ ಯಶಸ್ಸು ಲಭಿಸಲು ಸಾಧ್ಯವಿಲ್ಲ ಎಂದು ಕನ್ನಡದ ಖ್ಯಾತ ನಟಿ, ಬಹುಭಾಷ ತಾರೆ ಹಾಗೂ ಉತ್ತಮ ಗಾಯಕಿ ವಿನಯ ಪ್ರಸಾದ್ ಅಭಿಪ್ರಾಯ ಪಟ್ಟರು.

ಮಂಗಳೂರಿನ ಬೋಳೂರು ಸಮೀಪದ ಸುಲ್ತಾನ್ ಬತ್ತೇರಿಯ ಬೋಟ್ ಕ್ಲಬ್‌ನಲ್ಲಿ ಶನಿವಾರ ಸಂಜೆ ನಡೆದ ಅಂತರಾಷ್ಟ್ರೀಯ ಲಯನ್ಸ್ ಕ್ಲಬ್‌ಗಳ ಒಕ್ಕೂಟದ ಜಿಲ್ಲೆ 371-ಡಿ ಪ್ರಾಂತ್ಯ 8ರ ಪ್ರಾಂತೀಯ ಸಮ್ಮೇಳನ “ಆಶೋತ್ತರ”ದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಬಹಳಷ್ಟು ಮಂದಿ ಅವರವರ ಕಾರ್ಯ ಕ್ಷೇತ್ರದ ಬಗ್ಗೆ ಯೋಚಿಸುತ್ತಾ ನಾನು ಕೆಲಸ ಮಾಡುತ್ತಿರುವ ಕ್ಷೇತ್ರ ಬಹಳ ಕಷ್ಟದ ಕೆಲಸ. ನಾನು ಪಟ್ಟಕಷ್ಟ ನನ್ನ ಮಕ್ಕಳು ಪಡಬಾರದು ಎಂಬ ಭಾವನೆ ವ್ಯಕ್ತಪಡಿಸುತ್ತಾರೆ. ಆದರೆ ಯಾವೂದೇ ಕ್ಷೇತ್ರವಾಗಲಿ ಕಷ್ಟ ವಿಲ್ಲದ ಕ್ಷೇತ್ರವಿಲ್ಲ, ಕಷ್ಟ ಪಡದೆ ಯಶಸ್ಸು ಸಿಗಲು ಸಾಧ್ಯವಿಲ್ಲ. ಸಾಧಿಸುವ ಛಲವಿದ್ದರೆ ಅದು ಯಾವುದೇ ಕ್ಷೇತ್ರವಾಗಿದ್ದರೂ ಸಾಧಿಸುತ್ತೇವೆ. ನಮ್ಮ ಬಗ್ಗೆ ನಮಗೆ ಭರವಸೆಬೇಕು. ನಮ್ಮನ್ನು ಹೀಯಾಳಿಸುವ ಜನರಿಗೆ ನಮ್ಮ ಸಾಧನೆಯ ಮೂಲಕವೇ ಉತ್ತರ ನೀಡುವ ಪ್ರವೃತ್ತಿ ಪ್ರತಿಯೊಬ್ಬರಲ್ಲೂ ಬೆಳೆಯಬೇಕು ಎಂದು ಅವರು ಹೇಳಿದರು.

ಶ್ರೀ ಶಕ್ತಿ ವ್ಯಾಖ್ಯಾನಕ್ಕಿಂತ ಶ್ರೀ ಪುರುಷ ಸಮಾಜ ಅರ್ಥಪೂರ್ಣ :

ಇಂದಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ರಂಗಗಳಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದು, ಮಾತ್ರವಲ್ಲದೇ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಮುಂಚೂಣಿಯಲ್ಲಿರುವುದರಿಂದ ಶ್ರೀ ಶಕ್ತಿ ಪ್ರಬಲವಾಗುತ್ತಿರುವ ಬಗ್ಗೆ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಆದರೆ ಪುರುಷ ಪ್ರಧಾನ ಸಮಾಜದಲ್ಲಿ ಪುರುಷರು ಮಹಿಳೆಯರಿಗೆ ನೀಡುತ್ತಿರುವ ಗೌರವ ಹಾಗೂ ಅವಕಾಶ ಕೂಡ ಈ ಏಳಿಗೆಗೆ ಕಾರಣವಾಗಿರುವುದರಿಂದ ಶ್ರೀ ಶಕ್ತಿ ಸಮಾಜ ಎನ್ನುವುದಕ್ಕಿಂತ ಶ್ರೀಪುರುಷ ಸಮಾಜ ಎನ್ನುವುದು ಅರ್ಥಪೂರ್ಣ ಎಂದು ನನ್ನ ಅಭಿಪ್ರಾಯ ಎಂದು ವಿನಯ ಪ್ರಸಾದ್ ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿ ಅಂಕಣಕಾರ ಪೋ| ನರೇಂದ್ರ ರೈ ದೇರ್ಲ ಮಾತನಾಡಿ, ಲಯನ್ಸ್ ಸಂಸ್ಥೆಯ ಮೂಲಕ ಹಂಚಿಕೆ ನ್ಯಾಯ, ವಿನಿಮಯ ನ್ಯಾಯ, ಸರಿಪಡಿಸುವಿಕೆಯ ನ್ಯಾಯದ ಪಾಠ ಕಲಿಯಬಹುದು. ಎಲ್ಲ ಸಮುದಾಯಯವನ್ನು ಜೋಡಿಸುವ ಮಾಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಸಮಾರಂಭದ ರೂವಾರಿ, ಪ್ರಾಂತ್ಯಾಧ್ಯಕ್ಷೆ ಆಶಾ ಸಿ.ಶೆಟ್ಟಿ ಅವರು ಲಯನ್ಸ್ ಕ್ಲಬ್‌ಗಳ ಮೂಲಕ ನಡೆದಂತಹ ಸೇವಾ ಚಟುವಟಿಕೆಗಳ ಮಾಹಿತಿ ನೀಡಿದರು. ಲ. ಆಶೋಕ್ ಶೇಟ್ ವಿನಯ ಪ್ರಸಾದ್ ಅವರ ಪರಿಚಯ ಹಾಗೂ ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವರು ಮಾಡಿರುವ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಾಂತ್ಯಾಧ್ಯಕ್ಷೆ ಆಶಾ ಸಿ.ಶೆಟ್ಟಿ ಅವರ ಪತಿ ಲ. ಎ.ಚಂದ್ರಹಾಸ ಶೆಟ್ಟಿ, ಜಿಲ್ಲಾ ಗವರ್ನರ್ ಎಚ್.ಆರ್. ಹರೀಶ್, ಸಮ್ಮೇಳನ ಸಮಿತಿ ಅಧ್ಯಕ್ಷ ಎಂ.ಸಿ ಶೆಟ್ಟಿ, ಸಲಹೆಗಾರ ಕೆ.ಸಿ ಪ್ರಭು, ಎ.ಚಂದ್ರಹಾಸ ಶೆಟ್ಟಿ ಸಾರ್ವಜನಿಕ ಸಂಪರ್ಕಾಧಿಕಾರಿ (PRO) ಪ್ರಕಾಶ್ ಪೈ , ಅನಿಲ್ ದಾಸ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಹಾಯಧನ ವಿತರಣೆ:

ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳಿಗೆ ಒಂದು ವರ್ಷದ ಅನ್ನದಾನ ಪ್ರಯುಕ್ತ ದೇಣಿಗೆ, ಎರಡು ಬಡ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಸಹಾಯ, ಮೂಡಬಿದಿರೆಯ ಲಯನ್ಸ್ ಪಾರ್ಕಗೆ ದೇಣಿಗೆ, ನಗರದ ರೈಲ್ವೇ ಸ್ಟೇಷ್ಟನ್ ಗೆ ಅಂಗವಿಕಲರ ಸಹಾಯಕ್ಕಾಗಿ ಗಾಲಿ ಕುರ್ಚಿಗಳ ವಿತರಣೆ, ಕೊಣಾಜೆಯ ಲಯನ್ಸ್ ರುದ್ರಭೂಮಿಗೆ ನೀರಿನ ಸೌಲಭ್ಯಕ್ಕಾಗಿ ಸಹಾಯ ಹೀಗೆ ಹಲವಾರು ಸೇವಾ ಕಾರ್ಯಕ್ರಮಗಳನ್ನು ಅಯೋಜಿಸಲಾಯಿತು.

By : Sathish Kapikad / Mob : 9035089084

Comments are closed.