ಅಂತರಾಷ್ಟ್ರೀಯ

ಕಚ್ಚಿದಾಗ ಸ್ಫೋಟಗೊಂಡ ಐಫೋನ್‌ ಬ್ಯಾಟರಿ

Pinterest LinkedIn Tumblr


ಐಫೋನ್‌ ಬ್ಯಾಟರಿ ಕೊಳ್ಳುವಾಗ ಗುಣಮಟ್ಟವನ್ನು ಹೇಗೆಲ್ಲಾ ಪರೀಕ್ಷೆ ಮಾಡಬೇಕಾಗುತ್ತದೆ? ಚೀನಾದಲ್ಲೊಬ್ಬ ವ್ಯಕ್ತಿ ಬ್ಯಾಟರಿಯನ್ನು ಕಚ್ಚಿ ಪರೀಕ್ಷಿಸಿದ್ದಾನೆ. ಈತ ಅದನ್ನು ಕಚ್ಚಿ ಬಾಯಿಯಿಂದ ಹೊರತೆಗೆಯುತ್ತಲೇ ಅದು ಸ್ಫೋಟಿಸಿದೆ. ವ್ಯಕ್ತಿಯು ತನ್ನ ಐಫೋನ್‌ ಬ್ಯಾಟರಿ ಬದಲಾಯಿಸಲು ಆ್ಯಪಲ್‌ ಮಳಿಗೆಗೆ ತರಳಿದ್ದ.

ತನ್ನ ಫೋನ್‌ನ ಹಳೆ ಬ್ಯಾಟರಿಯಿಂದ ಬೇಸತ್ತಿದ್ದ ಆತ ಈ ಬಾರಿ ಬ್ಯಾಟರಿಯನ್ನು ಸರಿಯಾಗಿ ಪರೀಕ್ಷಿಸಿಯೇ ಕೊಳ್ಳುವುದು ಎಂದು ತೀರ್ಮಾನಿಸಿದ್ದ. ಅದಕ್ಕಾಗಿ ಬ್ಯಾಟರಿಯನ್ನು ಜೋರಾಗಿ ಕಚ್ಚಿದ್ದಾನೆ. ಅದು ಕೂಡಲೇ ಸ್ಫೋಟಗೊಂಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಷ್ಟು ದೊಡ್ಡದಾಗಿ ಬೆಂಕಿ ಜ್ವಾಲೆ ಕಾಣಿಸಿಕೊಂಡರೂ ಯಾರಿಗೂ ಏನು ಅನಾಹುತವಾಗಿಲ್ಲವಂತೆ.

-ಉದಯವಾಣಿ

Comments are closed.