ಮನೋರಂಜನೆ

ಪದ್ಮಾವತ್​ ವಿವಾದ: ಸೂರಜ್​ ಪಾಲ್​ ಅಮುಗೆ ಜ.29ರವರೆಗೆ ನ್ಯಾಯಾಂಗ ಬಂಧನ

Pinterest LinkedIn Tumblr


ಗುರುಗ್ರಾಮ: ಪದ್ಮಾವತ್​ ಚಿತ್ರದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಹರಿಯಾಣದ ಬಿಜೆಪಿ ನಾಯಕ ಮತ್ತು ಕರ್ಣಿ ಸೇನಾ ರಾಷ್ಟ್ರೀಯ ಕಾರ್ಯದರ್ಶಿ ಸೂರಜ್​ ಪಾಲ್​ ಅಮು ಅವರಿಗೆ ನ್ಯಾಯಾಲಯ ಜನವರಿ 29ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಪದ್ಮಾವತ್​ ಚಿತ್ರದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೂರಜ್​ ಪಾಲ್​ ಅವರನ್ನು ಗುರುವಾರ ಬಂಧಿಸಲಾಗಿತ್ತು. ಸುಪ್ರೀಂ ಕೋರ್ಟ್​ನಲ್ಲೂ ಸಹ ಸೂರಜ್​ ಪಾಲ್​ ಅವರ ವಿರುದ್ಧ ಅರ್ಜಿ ಸಲ್ಲಿಕೆಯಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಪೂರ್ವ ಗುರುಗ್ರಾಮದ ಡಿಸಿಪಿ ಕುಲದೀಪ್​ ಸಿಂಗ್​ ತಿಳಿಸಿದ್ದಾರೆ.

ಸೂರಜ್​ ಪಾಲ್​ ಅಮು ಅವರು 2017ರ ನವೆಂಬರ್​ನಲ್ಲಿ ದೀಪಿಕಾ ಪಡುಕೋಣೆ ಮತ್ತು ಸಂಜಯ್​ ಲೀಲಾ ಬನ್ಸಾಲಿ ಅವರ ತಲೆ ಕಡಿದವರಿಗೆ 10 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಅಮು ಹೇಳಿಕೆಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿತ್ತು.

Comments are closed.