ರಾಷ್ಟ್ರೀಯ

18 ಸಾವಿರ ಅಡಿ ಎತ್ತರ, ಮೈನಸ್ 30 ಡಿಗ್ರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಹಿಮವೀರರು

Pinterest LinkedIn Tumblr


ಹೊಸದಿಲ್ಲಿ: 69ನೇ ಗಣರಾಜ್ಯೋತ್ಸವದ ಅಂಗವಾಗಿ ಇಂಡೋ-ಟಿಬೆಟಿಯನ್ ಬಾರ್ಡರ್‌ ಪೊಲೀಸರು (ಐಟಿಬಿಪಿ) ಹಿಮಾಲಯದ ಅತೀ ಎತ್ತರ ಪ್ರದೇಶದಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸಿದರು.

ಸಮುದ್ರಮಟ್ಟದಿಂದ 18 ಸಾವಿರ ಅಡಿ ಎತ್ತರದಲ್ಲಿ ಮೈನಸ್ 30 ಡಿಗ್ರಿ ತಾಪಮಾಣದಲ್ಲಿ ಮೆರವಣಿಗೆ ಹೊರಟ ‘ಹಿಮವೀರರು’ ಧ್ವಜಾರೋಹಣ ನೆರವೇರಿಸಿ ದೇಶಭಕ್ತಿ ಮೆರೆದರು.

हिमाद्रि तुंग श्रृंग से
प्रबुद्ध शुद्ध भारती… #Himveers of #ITBP with #NationalFlag somewhere in the #Himalayas in minus 30 degrees at 18K ft #RepublicDay2018#RepublicDayParade2018 pic.twitter.com/y6fQGYIqQz
— ITBP (@ITBP_official) January 26, 2018

ಪ್ರಾಣವನ್ನೇ ಪಣಕ್ಕಿಟ್ಟು ದೇಶದ ಗಡಿ ಕಾಯುತ್ತಿರುವ ಸೈನಿಕರ ಸಂಭ್ರಮಾಚರಣೆಯ ವೀಡಿಯೋವನ್ನು ಐಟಿಬಿಪಿಯ ಅಧಿಕೃತ ಟ್ವಿಟರ್ ಪೇಜ್‌ನಲ್ಲಿ ಪೊಸ್ಟ್ ಮಾಡಲಾಗಿದೆ.

Happy #RepublicDay2018 from the #Himveers from the icy heights of the #Himalayas…
जय हिन्द!#ITBP@PIB_India@MIB_India pic.twitter.com/asBVTYnKsX
— ITBP (@ITBP_official) January 26, 2018

ಚೀನಾಕ್ಕೆ ಹೊಂದಿಕೊಂಡಿರುವ ಭಾರತೀಯ ಗಡಿ ರಕ್ಷಣೆ ಮಾಡುತ್ತಿರುವ ಐಟಿಬಿಪಿ ಪಡೆಗೆ ಟ್ವಿಟರ್ ಬಳಕೆದಾರರು ಶುಭಕೋರಿರುವುದು ಸೈನಿಕರ ದೇಶಭಕ್ತಿಯನ್ನು ಉತ್ತೇಜಿಸುತ್ತಿದೆ.

Comments are closed.