ಅಂತರಾಷ್ಟ್ರೀಯ

ಮೃತದೇಹ ಹೊರತೆಗೆದಾಗ ನಗುತ್ತಿರುವಂತೆ ಕಂಡರು!

Pinterest LinkedIn Tumblr


ಮೃತದೇಹವನ್ನು 2 ತಿಂಗಳ ಕಾಲ ಶವಪೆಟ್ಟಿಗೆಯಲ್ಲಿ ಇರಿಸಿ ಬಳಿಕ ಅದನ್ನು ಹೊರತೆಗೆದರೆ ಯಾರೂ ಅದರ ಮುಂದೆ ನಿಲ್ಲಲು ಸಾಧ್ಯವೇ ಇಲ್ಲ. ಆದರೆ ಇದಕ್ಕೆ ವಿರುದ್ಧವಾದ ಘಟನೆ ಥಾಯ್ಲೆಂಡ್‌ನ‌ ಲೋಪ್‌ಬುರಿಯಲ್ಲಿ ನಡೆದಿದೆ. ನ.16ರಂದು ಬೌದ್ಧ ಗುರು ಲುವಾಂಗ್‌ ಫೋರ್‌ ಪಿಯಾನ್‌
ಬ್ಯಾಂಕಾಕ್‌ನಲ್ಲಿ ನಿಧನರಾದರು.

ಅವರಿಗೆ 92 ವರ್ಷ ವಯಸ್ಸಾಗಿತ್ತು. ದೇಹವನ್ನು ಶವ ಪೆಟ್ಟಿಗೆಯಲ್ಲಿ 2 ತಿಂಗಳ ಕಾಲ ಇರಿಸಿ, ಬಳಿಕ ಅಂತ್ಯಸಂಸ್ಕಾರಕ್ಕಾಗಿ ಲೋಪ್‌ ಬುರಿಗೆ ತರಲಾಯಿತು. ದೇಹವನ್ನು ಹೊರತೆಗೆದಾಗ ಎಲ್ಲರಿಗೂ ಆಶ್ಚರ್ಯ. ಭಿಕ್ಷು ಪಿಯಾನ್‌ ನಗುಮೊಗದಿಂದ ಪೆಟ್ಟಿಗೆಯಿಂದ ಹೊರಬರುತ್ತಿರುವವರಂ ತೆ ಕಾಣುತ್ತಿದ್ದರು. ಅಲ್ಲದೆ ಅವರ ದೇಹ ಕೇವಲ 36 ಗಂಟೆಗಳ ಕೆಳಗೆ ಮೃತರಾದವರ ದೇಹದಂತೆ ಇತ್ತು.

-ಉದಯವಾಣಿ

Comments are closed.