ಅಂತರಾಷ್ಟ್ರೀಯ

ಗಗನ ಸಖಿ ನೀರಜಾ ಭಾನೋಟ್‌ ಹತ್ಯೆ ಪ್ರಕರಣ: 31 ವರ್ಷದ ಬಳಿಕ ಶಂಕಿತರ ಚಿತ್ರ ಬಿಡುಗಡೆ

Pinterest LinkedIn Tumblr


ವಾಷಿಂಗ್ಟನ್‌: ಅಮೆರಿಕದ ವಿಮಾನ ಅಪಹರಣ ಪ್ರಕರಣದಲ್ಲಿ ಉಗ್ರರಿಗೆ ಎದೆಯೊಡ್ಡಿ ನೂರಾರು ಪ್ರಯಾಣಿಕರ ಜೀವ ರಕ್ಷಿಸಿ ವೀರ ಮರಣವನ್ನಪ್ಪಿದ ಗಗನ ಸಖಿ ನೀರಜಾ ಭಾನೋಟ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 31 ವರ್ಷಗಳ ಬಳಿಕ ಅಮೆರಿಕ ತನಿಖಾ ಸಂಸ್ಥೆ ಎಫ್‌ಬಿಐ ಶಂಕಿತರ ಚಿತ್ರ ಬಿಡುಗಡೆ ಮಾಡಿದೆ.

1986ರ ಸೆಪ್ಟೆಂಬರ್‌ 5ರಂದು ಕರಾಚಿ ವಿಮಾನ ನಿಲ್ದಾಣದಲ್ಲಿ ನಡೆದ ಈ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಬಿಐ ಏಜ್‌ ಪ್ರೊಗ್ರೆಸ್ಡ್‌ ಟೆಕ್ನಾಲಜಿ ಬಳಸಿಕೊಂಡು ನಾಲ್ವರು ಶಂಕಿತ ಉಗ್ರರ ಚಿತ್ರಗಳನ್ನು ಪ್ರಕಟಿಸಿದೆ. ಈ ನಾಲ್ವರನ್ನು ಮೊಹಮ್ಮದ್‌ ಹಫೀಜ್‌ ಅಲ್‌ ತುರ್ಕಿ, ಜಮಾಲ್‌ ಸಯೀದ್‌ ಅಬ್ದುಲ್‌ ರಹೀಂ, ಮೊಹಮ್ಮದ್‌ ಅಬ್ದುಲ್ಲಾ ಖಲೀಲ್‌ ಹುಸೇನ್‌ ಉರ್‌ ರಹಯಾಲ್‌ ಮತ್ತು ಮೊಹಮ್ಮದ್‌ ಅಹ್ಮದ್‌ ಅಲ್‌ ಮುನಾವರ್‌ ಎಂದು ಗುರುತಿಸಲಾಗಿದೆ.

ಇವರೆಲ್ಲರೂ ಅಬು ನಿದಲ್‌ ಸಂಘಟನೆಗೆ ಸೇರಿದವರಾಗಿದ್ದು, ಅಮೆರಿಕದ ಮೋಸ್ಟ್‌ ವಾಂಟೆಂಡ್‌ ಟೆರರಿಸ್ಟ್‌ ಪಟ್ಟಿಗೆ ಸೇರಿಸಲಾಗಿದೆ ತನಿಖಾ ಸಂಸ್ಥೆ ಹೇಳಿದೆ. ಉಗ್ರರು ತಮ್ಮನ್ನು ವಶದಲ್ಲಿಸಿಕೊಂಡಿದ್ದರೂ ನೀರಜಾ ಅದರಿಂದ ಎದೆಗುಂದದೆ ಧೈರ್ಯ ಪ್ರದರ್ಶಿಸಿದ್ದರು. ತಮ್ಮ ಹಣೆಗೆ ಗುಂಡಿಟ್ಟು ನಿಂತಿದ್ದ ನಾಲ್ವರು ಉಗ್ರರಿಂದ 300ಕ್ಕೂ ಅಧಿಕ ಮಂದಿ ಪ್ರಯಾಣಿಕರಿಗೆ ಪುನರ್ಜನ್ಮ ಕೊಟ್ಟು ಕೊನೆಗೆ ತಮ್ಮ ಜೀವವನ್ನೇ ಬಲಿಕೊಟ್ಟಿದ್ದರು.

Comments are closed.