ಮನೋರಂಜನೆ

ಬನ್ಸಾಲಿಯ ಪದ್ಮಾವತ್ ಗೆ ದಾರಿ ಸಲೀಸು, ಬೆದರಿದ ಪ್ಯಾಡ್ ಮ್ಯಾನ್!

Pinterest LinkedIn Tumblr


ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಪ್ಯಾಡ್ ಮ್ಯಾನ್ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆಯಂತೆ. ಅದಕ್ಕೆ ಕಾರಣ ಸಂಜಯ್ ಲೀಲಾ ಬನ್ಸಾಲಿ ಅವರ ಪದ್ಮಾವತ್ ಸಿನಿಮಾ ರಿಲೀಸ್ ಹಿನ್ನಲೆ. ಹೌದು ಟ್ರೆಂಡ್ ತಜ್ಞರ ಪ್ರಕಾರ ಈ ನಿರ್ಧಾರದಿಂದ ಎರಡೂ ಸಿನಿಮಾಗಳಿಗೂ ಬಾಕ್ಸ್ ಆಫೀಸ್ ನಲ್ಲಿ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಜನವರಿ 25ರ ಬದಲು ಫೆಬ್ರುವರಿ 9ರಂದು ಪ್ಯಾಡ್ ಮ್ಯಾನ್ ಬಿಡುಗಡೆಯಾಗಲಿದ್ದು, 25ರಂದು ಪದ್ಮಾವತ್ ರಿಲೀಸ್ ಆಗಲಿದೆ ಎಂದು ಅಕ್ಷಯ್ ಕುಮಾರ್ ಹಾಗೂ ಬನ್ಸಾಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಪದ್ಮಾವತ್ ಸಿನಿಮಾಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕು. ಸಂಜಯ್ ಲೀಲಾ ಬನ್ಸಾಲಿ ನನ್ನ ಪ್ರೀತಿಯ ಗೆಳೆಯ. ಏನೆಲ್ಲಾ ನಡೆಯಿತು ಎಂಬುದು ನನಗೆ ತಿಳಿದಿದೆ. ಇಂತಹ ಸಂದರ್ಭದಲ್ಲಿ ನಾವು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಅಕ್ಷಯ್ ಹೇಳಿದರು.

ಆರ್ ಬಲ್ಕಿ ನಿರ್ದೇಶನದ ಪ್ಯಾಡ್ ಮ್ಯಾನ್ ಸಿನಿಮಾ ಸ್ಯಾನಿಟರಿ ನ್ಯಾಪ್ಕಿನ್ ಕುರಿತ ವಿಶಿಷ್ಠ ಕಥಾಹಂದರದ ಚಿತ್ರವಾಗಿದೆ. ಅಮಿತಾಬ್ ಬಚ್ಚನ್ ಅಥಿತಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಪತ್ನಿಯಾಗಿ ರಾಧಿಕಾ ಆಪ್ಟೆ ನಟಿಸಿದ್ದಾರೆ.

-ಉದಯವಾಣಿ

Comments are closed.