ಅಂತರಾಷ್ಟ್ರೀಯ

ನ್ಯೂಯಾರ್ಕ್‌ ಪೋರ್ಟ್‌ ಅಥಾರಿಟಿ ಬಸ್‌ ಟರ್ಮಿನಲ್‌ ಬಳಿ ಸ್ಫೋಟ

Pinterest LinkedIn Tumblr


ನ್ಯೂಯಾರ್ಕ್‌ : ಅತ್ಯಂತ ಬಿರುಸಿನ ಚಟುವಟಿಕೆಯ ತಾಣವಾಗಿರುವ ನ್ಯೂಯಾರ್ಕ್‌ ನಗರದ ಪೋರ್ಟ್‌ ಅಥಾರಿಟಿ ಬಸ್‌ ಟರ್ಮಿನಲ್‌ನಲ್ಲಿ ಸ್ಫೋಟ ಸಂಭವಿಸಿರುವುದಾಗಿ ಮಾಧ್ಯಮಗಳ ವರದಿ ಮಾಡುತ್ತಿವೆ.

ಸ್ಫೋಟ ಸಂಭವಿಸಿರುವ ಈ ತಾಣವು ನ್ಯೂಯಾರ್ಕ್‌ನ ಪ್ರಸಿದ್ಧ ಪ್ರಾತಿನಿಧಿಕ ತಾಣವಾಗಿರುವ ಟೈಮ್ಸ್‌ ಸ್ಕ್ವಾರ್‌ಗೆ ಸಮೀಪವೇ ಇದೆ.

ಈ ಸ್ಫೋಟವು ಭಯೋತ್ಪಾದಕರ ಕೃತ್ಯವೇ ? ಅಥವಾ ಬೇರೆ ಯಾವುದೇ ಕಾರಣದಿಂದ ಸಂಭವಿಸಿರಬಹುದಾದ ಸ್ಫೋಟವೇ ಎಂಬುದು ಈಗಿನ್ನೂ ಖಚಿತಪಟ್ಟಿಲ್ಲ. ಹಾಗೆಯೇ ಸ್ಫೋಟದಲ್ಲಿ ಮಡಿದವರ ಅಥವಾ ಗಾಯಗೊಂಡವರ ಸಂಖ್ಯೆ, ವಿವರಗಳು ಕೂಡ ಈ ತನಕ ಗೊತ್ತಾಗಿಲ್ಲ.

ನ್ಯೂಯಾರ್ಕ್‌ ಪೊಲೀಸ್‌ ಇಲಾಖೆಯು ಈ ಸ್ಫೋಟ ಕುರಿತಾಗಿ ಒಂದೇ ಸಾಲಿನ ಪ್ರಕಟನೆಯನ್ನು ಹೊರಡಿಸಿದೆ. “42ನೇ ರಸ್ತೆ ಮತ್ತು 8ನೇ ಅವೆನ್ಯೂ – ಮ್ಯಾನ್‌ಹಟನ್‌ನಲ್ಲಿ ಅಜ್ಞಾತ ಮೂಲದಿಂದ ಸಂಭವಿಸಿರುವ ಸ್ಫೋಟದ ವರದಿಗಳಿಗೆ ಎನ್‌ವೈಪಿಡಿ ಸ್ಪಂದಿಸುತ್ತಿದೆ. ಎ, ಸಿ ಮತ್ತು ಇ ಲೈನಿನಲ್ಲಿರುವವರನ್ನು ಸ್ಥಳಾಂತರಿಸಲಾಗುತ್ತಿದೆ. ಸ್ಫೋಟ ಕುರಿತಾಗಿ ಈಗ ದೊರಕಿರುವ ಮಾಹಿತಿ ಪ್ರಾಥಮಿಕ ಸ್ವರೂಪದ್ದಾಗಿದೆ. ಹೆಚ್ಚಿನ ಮಾಹಿತಿಗಳನ್ನು ಸಿಕ್ಕಿದಾಗ ಅವುಗಳನ್ನು ಪ್ರಕಟಿಸಲಾಗುವದು’.

ಈ ನಡುವೆ ಎನ್‌ವೈಪಿಡಿ ಟ್ರಾನ್ಸಿಟ್‌ ವಿಭಾಗದ ಮುಖ್ಯಸ್ಥರು ಟ್ವೀಟ್‌ ಮಾಡಿ, “ಟೈಮ್ಸ್‌ ಸ್ಕ್ವಾರ್‌ ಮೂಲಕ ಸಾಗುವ ಎಲ್ಲ subway ಸೇವೆಗಳನ್ನು ನಿರ್ಬಂಧಿಸಲಾಗಿದೆ. ಈ ತಾಣಕ್ಕೆ ಹೋಗದಿರುವಂತೆ ಎಲ್ಲರಿಗೂ ಸೂಚಿಸಲಾಗಿದೆ’ ಎಂದು ಹೇಳಿದ್ದಾರೆ.

-ಉದಯವಾಣಿ

Comments are closed.