ಹೊಸದಿಲ್ಲಿ: ಕಾಂಗ್ರೆಸ್ ಹಾಗೂ ಪಾಕಿಸ್ತಾನ ಹರಿಹಾಯ್ದ ನಂತರ ಇದೀಗ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಸಹ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದು, ‘ಕೋಮು ಸಂಘರ್ಷ ತರಬೇಡಿ,’ ಎಂದು ಬುದ್ಧೀವಾದ ಹೇಳಿದ್ದಾರೆ.
‘ಇದೀಗ ಚುನಾವಣೆಯ ಅಂತಿಮ ಪ್ರಕ್ರಿಯೆಲ್ಲಿದ್ದು, ಗಲ್ಲಲೇ ಬೇಕೆಂದು ರಾಜಕೀಯ ವಿರೋಧಿಗಳ ಬಗ್ಗೆ ನಂಬಲಸಾಧ್ಯವಾದ, ರುಜುವಾತಾಗಾದ ಕಥೆ ಕಟ್ಟುವ ಅಗತ್ಯವಿದೆಯೇ? ಪಾಕಿಸ್ತಾನದ ರಾಯಭಾರಿ ಮತ್ತು ಇತರೆ ಅಧಿಕಾರಿಗಳೊಂದಿಗೆ ಕಾಂಗ್ರೆಸ್ಸಿಗೆ ಸಂಪರ್ಕವಿದೆ ಎಂದು ಹೇಳುತ್ತಿರುವುದು ಏಕೆ,’ ಎಂದು ಸಿನ್ಹಾ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
‘ಕೋಮು ಸಂಘರ್ಷಕ್ಕೆಡೆ ಮಾಡುವಂತೆ ವಿಷಯಗಳನ್ನು ಪ್ರಸ್ತಾಪಿಸುವ ಬದಲು, ಆರೋಗ್ಯಕಾರಿ ರಾಜಕಾರಣದ ಮಾಡಿ, ಚುನಾವಣೆ ಎದುರಿಸಲಿ,’ ಎಂದು ಸಿನ್ಹಾ ಹೇಳಿದ್ದಾರೆ.
ಇತ್ತೀಚೆಗೆ ಆಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವಿದ ಜಾಗದಲ್ಲಿ ರಾಮ ಮಂದಿರ ನಿರ್ಮಾಣ ಹಾಗೂ ಮೊಗಲ್ ಮನಸ್ಥಿತಿಯನ್ನು ಉಲ್ಲೇಖಿಸಿ, ನೀಡಿದ ಮೋದಿ ಹೇಳಿಕೆಗಳಿಗೆ ಸಿನ್ಹಾ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕ ಮಣಿ ಶಂಕರ್ ಅಯ್ಯರ್ ಮೋದಿ ವಿರುದ್ಧ ಪಾಕಿಸ್ತಾನಕ್ಕೆ ಸುಪಾರಿ ನೀಡಿದ್ದು ಹಾಗೂ ಪಾಕಿಸ್ತಾನದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾಗಿಯೂ ಮೋದಿ ಆರೋಪಿಸಿದ್ದರು.