ಅಂತರಾಷ್ಟ್ರೀಯ

ಹುಲಿಗೆ ತಿನ್ನಿಸಲು ಹೋಗಿ ಕೈ ಕಚ್ಚಿಸಿಕೊಂಡರು!

Pinterest LinkedIn Tumblr


ಮೃಗಾಲಯಗಳಲ್ಲಿ, ಸರ್ಕಸ್‌ಗಳಲ್ಲಿ ಪ್ರಾಣಿಗಳನ್ನು ಮುಟ್ಟಬೇಡಿ, ಅವುಗಳಿಗೆ ಏನನ್ನೂ ತಿನ್ನಿಸಬೇಡಿ ಎಂದು ಬೋರ್ಡ್‌ ಹಾಕಿರುತ್ತಾರೆ. ಆದರೂ ಕೆಲವರಿಗೆ ಪ್ರಾಣಿಗಳನ್ನು ನೋಡುತ್ತಿದ್ದಂತೆ ಅವುಗಳಿಗೆ ಏನನ್ನಾದರೂ ತಿನ್ನಿಸುವ ಬಯಕೆಯಾಗುತ್ತದೆ. ಹೀಗೆ ಸರ್ಕಸ್‌ ಹುಲಿಯೊಂದಕ್ಕೆ ಆಹಾರ ತಿನ್ನಿಸಲು ಹೋದ ಚೀನಾದ ವಯಸ್ಸಾದ ವ್ಯಕ್ತಿಯೊಬ್ಬರು ಈಗ ಕೈಯನ್ನೇ ಕಳೆದು ಕೊಳ್ಳುವ ಸ್ಥಿತಿಯಲ್ಲಿದ್ದಾರೆ. \

ಸರ್ಕಸ್‌ ಹುಲಿಯನ್ನು ಬೋನಿನಲ್ಲಿ ಇರಿಸಲಾಗಿತ್ತು. ಇದನ್ನು ನೋಡಿದ ಹಿರಿಯ ವ್ಯಕ್ತಿಗೆ ಅದಕ್ಕೆ ಏನಾದರೂ ತಿನ್ನಿಸುವ ಬಯಕೆಯಾಗಿ ಬೋನಿನೊಳಗೆ ಕೈ ಹಾಕಿ ಆಹಾರ ತಿನ್ನಿಸುತ್ತಿದ್ದರು. ಈ ವೇಳೆ ಹುಲಿ ಅವರ ಕೈಯನ್ನು ಬಲವಾಗಿ ಕಚ್ಚಿದೆ. ಕೂಡಲೇ ಅವರು ಪ್ರಜ್ಞಾಹೀನರಾಗಿ ನೆಲದ ಮೇಲೆ ಬಿದ್ದಿದ್ದಾರೆ. ಈ ದೃಶ್ಯ ಹತ್ತಿರದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಒಂದು ಕಡೆ ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದ್ದರೆ, ಇತ್ತ ಕೈ ಸರಿ ಆಗುವ ಕುರಿತು ವೈದ್ಯರು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಪ್ರಾಣಿಗಳನ್ನು
ಪ್ರೀತಿಸುವುದೆಂದರೆ ಅವಕ್ಕೆ ತಿನ್ನಿಸುವುದು ಎಂದುಕೊಂಡವರಿಗೆ ಇದೊಂದು ಪಾಠ.

-ಉದಯವಾಣಿ

Comments are closed.