ಅಂತರಾಷ್ಟ್ರೀಯ

ಪಾಕಿಸ್ತಾನ: ಕೋಳಿ ಮೇಲೆ ಲೈಂಗಿಕ ಕೃತ್ಯ ಎಸಗಿದ ಅಪ್ರಾಪ್ತನ ಬಂಧನ

Pinterest LinkedIn Tumblr


ಇಸ್ಲಾಮಾಬಾದ್: ಅಪ್ರಾಪ್ತ ಬಾಲಕನೊಬ್ಬ ಕೋಳಿಯ ಮೇಲೆ ಲೈಂಗಿಕ ಕೃತ್ಯ ಎಸಗಿ ಅದನ್ನು ಸಾಯಿಸಿದ ಆರೋಪದ ಮೇಲೆ ಬಂಧನಕ್ಕೊಳಗಾದ ಘಟನ ಪಾಕಿಸ್ತಾನದ ಪಂಜಾಬ್‌ನ ಹಫೀಜಾಬಾದ್‌‌ನಲ್ಲಿ ನವೆಂಬರ್ 11ರಂದು ನಡೆದಿದೆ.

ಜಾಲಾಲ್‌ಪೂರ್ ಭಟ್ಟಿಯಾನ್ ಮೂಲದ 14 ವರ್ಷದ ಬಾಲಕ ಕೋಳಿ ಮೇಲೆ ಲೈಂಗಿಕ ಕೃತ್ಯ ಎಸಗಿ ಅದನ್ನು ಸಾಯಿಸಿದ್ದಾಗಿ ಪಾಕಿಸ್ತಾನ ಪೊಲೀಸರು ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ಪತ್ರಿಕೆಗೆ ತಿಳಿಸಿದ್ದಾರೆ. ಈ ಸಂಬಂಧ ಬಾಲಕನ ವಿರುದ್ಧ ಕೋಳಿಯ ಮಾಲೀಕ ಪೊಲೀಸರಿಗೆ ದೂರು ನೀಡಿದ್ದರು.

ಆರೋಪಿಯು ತನ್ನ ಕೋಳಿಯನ್ನು ಮನೆಗೆ ತೆಗೆದುಕೊಂಡು ಹೋಗಿ ಈ ಕೃತ್ಯ ಎಸಗಿದ್ದಾಗಿ ಕೋಳಿಯ ಮಾಲೀಕ ದೂರುನಲ್ಲಿ ತಿಳಿಸಿದ್ದಾನೆ. ಇಬ್ಬರು ವ್ಯಕ್ತಿಗಳು ಆ ಘಟನೆಯನ್ನು ಪ್ರತ್ಯಕ್ಷ ನೋಡಿದ್ದಾರೆಂದು ಎಂದೂ ಪೊಲೀಸರು ತಿಳಿಸಿದ್ದಾರೆ.

ಜಲಾಲಾಪೂರ್ ಭಟ್ಟಿಯಾನ್ ಪೊಲೀಸ್ ಅಧಿಕಾರಿ ಸರ್ಫರಾಜ್ ಅಂಜುಮ್ ಈ ಬಗ್ಗೆ ಪ್ರತಿಕ್ರಿಯಿಸುತ್ತಾ,’ಆ ಬಾಲಕನನ್ನು ಬಂಧಿಸಿದ್ದೇವೆ. ಕೋಳಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದಾಗ ಕೃತ್ಯ ನಡೆದಿರುವುದು ಬಹಿರಂಗವಾಗಿದೆ. ಲೈಂಗಿಕ ಆಸೆ ಪೂರೈಸಿಕೊಳ್ಳಲು 14 ವರ್ಷ ಬಾಲಕ ಈ ಕೆಲಸ ಮಾಡಿದ್ದಾನೆಂದು’ ಸರ್ಫರಾಜ್ ತಿಳಿಸಿದ್ದಾರೆ.

Comments are closed.