ರಾಷ್ಟ್ರೀಯ

ಮೂವರು ದುಷ್ಕರ್ಮಿಗಳ ಹುಟ್ಟಡಗಿಸಿದ 72ರ ನಿವೃತ್ತ ಯೋಧ!

Pinterest LinkedIn Tumblr


ಘಾಜಿಯಾಬಾದ್: ಮೂವರು ಶಸ್ತ್ರ ಸಜ್ಜಿತ ದುಷ್ಕರ್ಮಿಗಳು ಆಭರಣ ಅಂಗಡಿಯೊಂದರಲ್ಲಿ ಕಳ್ಳತನಕ್ಕೆ ಯತ್ನಿಸಿದ್ದು, ಇದನ್ನು ಗಮನಿಸಿದ 72 ವರ್ಷದ ನಿವೃತ್ತ ಯೋಧರೊಬ್ಬರು ಎಲ್ಲರನ್ನೂ ಎಚ್ಚರಿಸಿ, ತಪ್ಪಿಸಿದ್ದಾರೆ. ಆದರೆ, ಯೋಧನ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಗಾಯಗೊಂಡೇ ಸುಮಾರು 1 ಕಿ.ಮೀ.ದೂರ ಓಡಿ, ದುಷ್ಕರ್ಮಿಗಳನ್ನು ಹಿಡಿಯಲು ಈ ಯೋಧ ಯತ್ನಿಸಿದ್ದು, ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಇಲ್ಲಿನ ವೈಶಾಲಿ ಸೆಕ್ಟರ್‌ 5 ಮಾರುಕಟ್ಟೆಯಲ್ಲಿರು ಚಿನ್ನಾಭರಣ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ನಿವೃತ್ತ ಯೋಧ ರಘುನಂದನ್ ವರ್ಮಾ ಅವರ ಸಾಹಸ ಕಂಡು ಮೂವರು ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕೀಳಲು ಯತ್ನಿಸಿದ್ದಾರೆ. ಆಗ ಪೊಲೀಸರು ಹಾರಿಸಿದ ಗುಂಡಿಗೆ ಒಬ್ಬ ದುಷ್ಕರ್ಮಿ ಗಾಯಗೊಂಡಿದ್ದು, ಇಬ್ಬರು ಪರಾರಿಯಾಗಿದ್ದಾರೆ. ಗಾಯಗೊಂಡಿರುವ ದುಷ್ಕರ್ಮಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಗೊಂಡಿರುವ ನಿವೃತ್ತ ಯೋಧ ವರ್ಮಾ ಅವರನ್ನು ನಗರದ ಪಾರಸ್ ಆಸ್ಪತ್ರಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಕಳೆದ 35 ವರ್ಷಗಳ ಹಿಂದೆಯೇ ಮೇಜರ್ ರಘುನಂದನ್ ವರ್ಮಾ ಅವರು ಭಾರತೀಯ ಸೇನೆಯಿಂದ ನಿವೃತ್ತರಾಗಿದ್ದಾರೆ. ಘಾಜಿಯಾಬಾದ್‌ನ ವಸುಂಧರಾ ಸೆಕ್ಟರ್-9ರ ನಿವಾಸಿಯಾಗಿರುವ ವರ್ಮಾ, ಜಿಡಿಎ ಮಾರುಕಟ್ಟೆಯಲ್ಲಿ ಚಿನ್ನಾಭರಣದ ಮಳಿಗೆ ಹೊಂದಿದ್ದಾರೆ.

Comments are closed.