ಗಲ್ಫ್

ಮಸ್ಕತ್ತಿನಲ್ಲಿ ಕೊಲ್ಲಿಯ ಪ್ರಪ್ರಥಮ ಕರ್ನಾಟಕ ರಾಜ್ಯೋತ್ಸವ ಕಪ್ ವಾಲಿಬಾಲ್ – ತ್ರೋಬಾಲ್ ಪಂದ್ಯಾವಳಿ

Pinterest LinkedIn Tumblr

ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ – ಮಂಗಳೂರು ಸ್ಪೈಕರ್ಸ್ ಸಂಸ್ಥೆಯು ಕರ್ನಾಟಕ ಸಂಘದ ಸಹಭಾಗಿತ್ವದೊಂದಿಗೆ ” ಕರ್ನಾಟಕ ರಾಜ್ಯೋತ್ಸವ ಕಪ್ ” ವಾಲಿಬಾಲ್ ಪಂದ್ಯಾವಳಿಯನ್ನು ಮಸ್ಕತ್ ಸ್ಪೋರ್ಟ್ಸ್ ಕ್ಲಬ್ ನ ಒಳ ಕ್ರೀಡಾಂಗಣದಲ್ಲಿ 3/11/2017 ರಂದು ಯಶಸ್ವಿಯಾಗಿ ನೆರವೇರಿಸಿತು.

” ಕರ್ನಾಟಕ ರಾಜ್ಯೋತ್ಸವ ಕಪ್” ವಾಲಿಬಾಲ್ ಪಂದ್ಯಾವಳಿ ಗಲ್ಫ್ ರಾಷ್ಟ್ರವೊಂದರಲ್ಲಿ ನಡೆಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಈ ಪಂದ್ಯಾವಳಿಯಲ್ಲಿ ಒಟ್ಟು ಐದು ತಂಡಗಳು ಭಾಗವಹಿಸಿದ್ದು ಇದರಲ್ಲಿ ಒಮಾನ್ , ಸೌದಿ ಅರಬೀಯ, ದುಬೈ ಹಾಗೂ ಭಾರತ ದೇಶಗಳಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಅಟಗಾರರನ್ನು ಆಹ್ವಾನಿಸಲಾಗಿತ್ತು. ಈ ಹಿಂದೆ ಮಂಗಳೂರು ಸ್ಪೈಕರ್ಸ್ ತಂಡದವರು ಇಂಡಿಪೆಂಡೆನ್ಸ್ ಡೇ ಕಪ್ ಹಾಗೂ ಒಮಾನ್ ನ್ಯಾಷನಲ್ ಡೇ ಕಪ್ ಮುಂತಾದ ಪಂದ್ಯಾವಳಿಗಳನ್ನು ಆಯೋಜಿಸಿ , ಅಂತರಾಷ್ಟ್ರೀಯ ಆಟಗಾರರಾದ ಶ್ರೀ ಅನೂಪ್ ಡಿಕೋಸ್ತ ,ಶುಭೇ ಸಿಂಗ್, ಅಶ್ವಲ್ ರೈ , ಸುಜಿತ್ ಆಚಾರ್ಯ ಮುಂತಾದ ದಿಗ್ಗಜರನ್ನು ಮಸ್ಕತ್ತಿನ ವಾಲಿಬಾಲ್ ಪ್ರೇಮಿಗಳಿಗೆ ಪರಿಚಯಿಸಿತ್ತು.

” ಕರ್ನಾಟಕ ರಾಜ್ಯೋತ್ಸವ ಕಪ್” ವಾಲಿಬಾಲ್ ಪಂದ್ಯಾವಳಿಯನ್ನು ಮಲ್ಟಿಟೆಕ್ ಕಾಂಟ್ರಾಕ್ಟಿಂಗ್ ಕಂಪನಿಯ ವ್ಯವಸ್ಥಾಪಕರಾದ ಶ್ರೀಯುತ ದಿವಾಕರ ಶೆಟ್ಟಿಯವರು ಉದ್ಘಾಟಿಸಿದರು. ಶ್ರೀಮತಿ ಸುಧೀರಾ ದಿವಾಕರ ಶೆಟ್ಟಿಯವರು ಮಹಿಳಾ ಅತಿಥಿಯಾಗಿ ಆಗಮಿಸಿ ಮಹಿಳೆಯರ ತ್ರೋಬಾಲ್ ಪಂದ್ಯಗಳನ್ನು ಉದ್ಘಾಟಿಸಿದರು. ಈ ಪಂದ್ಯಾವಳಿಗೆ ಬ್ಯಾಂಕ್ ಮಸ್ಕತ್ ನ ಅನಿವಾಸಿ ವಿಭಾಗದ ಮುಖ್ಯಸ್ಥರಾದ ಶ್ರೀಯುತ ಜಿ.ವಿ.ರಾಮಕೃಷ್ಣ ರವರು ಅಧ್ಯಕ್ಶರಾಗಿದ್ದರು ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀಯುತ ಕರುಣಾಕರ್ ರಾವ್ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಮಸ್ಕತ್ ಬಿಲ್ಲವಾಸ್ ನ ಅಧ್ಯಕ್ಷರಾದ ಶ್ರೀ ಎಸ ಕೆ ಪೂಜಾರಿ, ಎಸ ಟಿ ಎಸ್ ಕಂಪನಿಯ ಶ್ರೀ ಗಣೇಶ್ ಶೆಟ್ಟಿ , ಲಾಹೂಬ್ ಟ್ರೇಡಿಂಗ್ ನ ಶ್ರೀ ಯುವರಾಜ್ ಸಾಲಿಯಾನ್, ಮಾಜಿ ರಾಷ್ಟ್ರೀಯ ಮಹಿಳಾ ಆಟಗಾರ್ತಿ ರೋಲಿನ್ ಮಾಬೆನ್ ಮುಂತಾದವರು ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದರು.

ಕರ್ನಾಟಕ ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ರಮೇಶ್ ಕುಮಾರ್ , ಖಜಾಂಚಿಗಳಾಗಿರುವ ಶ್ರೀ ಭೀಮ್ ರಾವ್ ಹಂಗರಗೆ ಅಲ್ಲದೆ ಸಮಿತಿಯ ಸದಸ್ಯರುಗಳಾದ ಶ್ರೀಮತಿ ಭಾರತಿ ಬಾಳಗುರಗಿ, ಶ್ರೀಮತಿ ಜಯಲಕ್ಮಿ ಶೆಣೈ ಇವರುಗಳು ಉಪಸ್ಥಿತರಿದ್ದರು.  ಮುಖ್ಯ ಅತಿಥಿಗಳಿಗೆ ಪುಟಾಣಿಗಳಾದ ತೃಪ್ತಿ , ಅರ್ಪಿತ ಹಾಗೂ ಶ್ರೀಯಾ ಹೂ ಗುಚ್ಛ ನೀಡಿ ಸ್ವಾಗತಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಕರ್ನಾಟಕ ಸಂಘದ ಸದಸ್ಯರಾದಂತಹ ಶ್ರೀಮತಿ ಗೀತಾ ಭಟ್ , ಶ್ರೀಮತಿ ನಿರ್ಮಲ ಅಮರೇಶ್ , ಶ್ರೀಮತಿ ಸುನೀತಾ ತೆವರಿ , ಶ್ರೀಮತಿ ನಿರ್ಮಲ ಶಿವಣ್ಣ , ಡಾಕ್ಟರ್ ಮಾಲತಿ , ಶ್ರೀ ಕಿಶನ್ ಶೆಟ್ಟಿ , ಶ್ರೀ ರಾಜು ಸುಬ್ರಮಣ್ಯ , ಶ್ರೀ ರಂಜಿತ್ ರಾವ್ , ಶ್ರೀ ಶಿವಾನಂದ ತೆವರಿ ಇವರು ಕನ್ನಡದ ಕಂಪು ಸೂಸುವ ನಾಡಗೀತೆ ” ಭಾರತ ಜನನಿಯ ತನುಜಾತೆ ” ಯನ್ನು ಉತ್ಸಾಹ ಪೂರ್ವಕವಾಗಿ ಹಾಡಿ ಸಭಿಕರಲ್ಲಿ ಕರ್ನಾಟಕದ ಅಭಿಮಾನವನ್ನು ಜಾಗೃತಗೊಳಿಸಿದರು .

ಅತ್ಯಂತ ರೋಮಾಂಚಕಾರಿಯಾಗಿ ನಡೆದ ಪುರುಷರ ವಾಲಿಬಾಲ್ ವಿಭಾಗದ ಫೈನಲ್ ಪಂದ್ಯದಲ್ಲಿ “ತುಳು ಎಕ್ಸ್ ಪ್ರೆಸ್ ” ತಂಡದವರು “ಯುನೈಟೆಡ್ ಮಂಗಳೂರು ಫ್ರೆಂಡ್ಸ್ ” ತಂಡವನ್ನು ನೇರ ಸೆಟ್ಟುಗಳಿಂದ ಪರಾಭವಗೊಳಿಸಿ ಚಾಂಪಿಯನ್ನರಾಗಿ ಮೂಡಿ ಬಂದರು. ” ಯುನೈಟೆಡ್ ಮಂಗಳೂರು ಫ್ರೆಂಡ್ಸ್ ” ತಂಡವು ದ್ವಿತೀಯ ಸ್ಥಾನ ಪಡೆಯಿತು.

ಮಹಿಳೆಯರ ತ್ರೋಬಾಲ್ ಪಂದ್ಯದಲ್ಲಿ ” ತುಳು ಎಕ್ಸ್ ಪ್ರೆಸ್ ” ತಂಡವು ” ಪೋಖರಿ ವಾರಿಯರ್ಸ್ ” ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು. ಎ ಸ್ ಟಿ ಎಸ್ ಸಂಸ್ಥೆ ಯಾ ಶ್ರೀ ಗಣೇಶ್ ಶೆಟ್ಟಿಯವರು ವಿಜೇತರಿಗೆ ಬಹುಮಾನ ಮಾಡಿದರು.

ಬಿ.ಜೆ. ಮಸ್ಕತ್ ತಂಡದ ಶ್ರೀ ಸುದೀಪ್ ಶೆಟ್ಟಿ ಕುಂದಾಪುರ ಇವರು ಇಡೀ ಪಂದ್ಯಾವಳಿಯಲ್ಲಿ ಎಲ್ಲರ ಗಮನ ಸೆಳೆದು” ಪಂದ್ಯಾವಳಿಯ ಶ್ರೇಷ್ಠ ” ಆಟಗಾರರಾಗಿ “ರಾಜ್ಯೋತ್ಸವ ಕಪ್ ನ ತಾರೆ” ಯಾಗಿ ಮೂಡಿ ಬಂದರು. ಇದಲ್ಲದೆ ತುಳು ಎಕ್ಸ್ ಪ್ರೆಸ್ ತಂಡದ ಶ್ರೀ ಸಜನ್ ಆಳ್ವ – ಶ್ರೇಷ್ಠ ಪಾಸರ್, ಅದೇ ತಂಡದ ಶ್ರೀ ಅಶ್ವಲ್ ರೈ ಶ್ರೇಷ್ಠ ಸ್ಟ್ರೈಕರ್ , ಹಾಗೂ “ಯುನೈಟೆಡ್ ಮಂಗಳೂರು ಫ್ರೆಂಡ್ಸ್ ” ತಂಡದ ಶ್ರೀ ಅಜಿತ್ ಕುಂದಾಪುರ ಶ್ರೇಷ್ಠ ಆಲ್ರೌಂಡರ್ ಪ್ರಶಸ್ತಿ ಗಿಟ್ಟಿಸಿಕೊಂಡರು.

ಪ್ರಾಯೋಜಕರಾಗಿ ಲಾಹೂಬ್ ಟ್ರೇಡಿಂಗ್ ನ ಶ್ರೀ ಯುವರಾಜ್ ಸಾಲಿಯಾನ್, ಅಲ್ ಕೈಫ್ ಟ್ರೇಡಿಂಗ್ ನ ಶ್ರೀ ಗಿರೀಶ್ ಕಾಂಚನ್ ,ನವ ಸೂರ್ ರೆಸ್ಟೊರಾಂಟ್ ನ ಶ್ರೀ ಸಂತೋಶ್ ಕೋಟಿಯಾನ್ ,ಅಬು ಮವ್ಜಾ ಅಲ್ ಕೀಯೂಮಿ ಟ್ರೇಡಿಂಗ್ ನ ಶ್ರೀ ಜನಾರ್ಧನ್ ಪೂಜಾರಿ, ಅಲ್ ಮವದ್ಧ ಟ್ರೇಡಿಂಗ್ ನ ಶ್ರೀ ಕ್ಯಾಲ್ವಿನ್ ಡಿಸೋಜ ಇವರುಗಳೆಲ್ಲರ ಸಹಕಾರದಿಂದ ” ಕರ್ನಾಟಕ ರಾಜ್ಯೋತ್ಸವ ಕಪ್” ಒಂದು ಯಶಸ್ವೀ ಪಂದ್ಯಾವಳಿಯಾಗಿ ಕ್ರೀಡಾರಸಿಕರೆಲ್ಲರ ಮನ ತಣಿಸಿತು.

ಶ್ರೀಮತಿ ವಿದ್ಯಾರಾಣಿ ಯವರು ಕಾರ್ಯಕರ್ಮದ ರೂವಾರಿಯಾಗಿ ತಮ್ಮ ಉತ್ತಮ ನಿರೂಪಣೆಯೊಂದಿಗೆ ಕಾರ್ಯಕ್ರಮದ ಆಕರ್ಷಣೆಯನ್ನು ಇಮ್ಮಡಿಗೊಳಿಸಿದರು.

ಶ್ರೀ ದೇವಾನಂದ್ ಅಮೀನ್ ಇವರ ನೇತೃತ್ವದ ಮಂಗಳೂರು ಸ್ಪೈಕರ್ಸ್ ತಂಡ ಅತ್ಯಂತ ಚೊಕ್ಕವಾಗಿ ಪಂದ್ಯಾವಳಿಯನ್ನು ಆಯೋಜಿಸುವುದರಲ್ಲಿ ಅತೀ ನಿಪುಣರು ಎಂಬುದನ್ನು ಈ ಪಂದ್ಯಾವಳಿ ಮತ್ತೊಮ್ಮೆ ನಿರೂಪಿಸಿತು.

Comments are closed.