ಅಂತರಾಷ್ಟ್ರೀಯ

ವಿದೇಶಿ ಗೂಢಚಾರ ಸಂಸ್ಥೆಯಿಂದ ಉಗ್ರ ಸಯೀದ್‌ ಕೊಲೆಗೆ ಯತ್ನ: ಪಾಕ್‌ಗೆ ಆತಂಕ

Pinterest LinkedIn Tumblr


ಇಸ್ಲಾಮಾಬಾದ್: ಭಾರತದ ಗುಪ್ತಚರ ಸಂಸ್ಥೆ ರಿಸರ್ಚ್ ಮತ್ತು ಅನಲಿಸಿಸ್ ವಿಂಗ್ (RAW) ಅನ್ನು ಪರೋಕ್ಷವಾಗಿ ಉಲ್ಲೇಖಿಸಿದ ಪಾಕಿಸ್ತಾನ, ಉಗ್ರ ಹಫೀಜ್ ಸಯೀದ್‌ನನ್ನು ಕೊಲ್ಲಲು ‘ವಿದೇಶಿ ಗೂಢಚಾರ’ ಸಂಸ್ಥೆಯೊಂದು ಯತ್ನಿಸುತ್ತಿದೆ, ಎಂದು ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್ ಗೃಹ ಇಲಾಖೆಗೆ ಮುಂಬಯಿ ಉಗ್ರ ದಾಳಿಯ ರೂವಾರಿ, ಬಂಧಿತ ಹಫೀಜ್ ಸಯೀದ್‌ಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಕೋರಿದೆ.

ಪಂಜಾಬ್ ಪ್ರಾಂತ್ಯದಲ್ಲಿರುವ ಸಯೀದ್‌ನನ್ನು ಈ ವರ್ಷದ ಆದಿಯಲ್ಲಿ ಬಂಧಿಸಿ, ಆತನ ಮನೆಯನ್ನೇ ಜೈಲೆಂದು ಘೋಷಿಸಿ, ಗೃಹ ಬಂಧನದಲ್ಲಿ ಇರಿಸಲಾಗಿದೆ.

ಉಗ್ರ ಧಮನಕ್ಕಾಗಿ ಇರುವ ಪಾಕಿಸ್ತಾನದ ರಾಷ್ಟ್ರೀಯ ಉಗ್ರ ವಿರೋಧಿ ಸಂಸ್ಥೆ (NCTA) ಪಂಜಾಬ್ ಪ್ರಾಂತ್ಯದ ಗೃಹ ಇಲಾಖೆಗೆ ಪತ್ರವೊಂದನ್ನು ಕಳುಹಿಸಿದ್ದು, ಸಯೀದ್‌ನನ್ನು ಮುಗಿಸಲು ನಿಷೇಧಿತ ಉಗ್ರ ಸಂಘಟನೆಯ ಇಬ್ಬರಿಗೆ 80 ಲಕ್ಷ ರೂ. ನೀಡಿದೆ, ಎಂದಿದೆ.

ಪಾಕಿಸ್ತಾನದ ಭಯೋತ್ಪಾದನಾ ಸಮಸ್ಯೆಯನ್ನು ತಡೆಯಲು 2009ರಲ್ಲಿ NCTA ರಚಿಸಲಾಗಿದೆ. ಭದ್ರತೆಗೆ ಸಂಬಂಧಿಸಿದ ವಿಷಯಗಳೆಡೆಗೆ ಈ ಸಂಸ್ಥೆ ಗಮನಹರಿಸುತ್ತದೆ.

ಸಯೀದ್ ಸ್ಥಾಪಿಸಿದ ಜಮಾಉತ್ ಉದ್ ದಾವಾ (JuD)ವನ್ನು ನಿಷೇಧಿಸಿಲಾಗಿದ್ದು, ಬದಲಾಗಿ ಮಿಲ್ಲಿ ಮುಸ್ಲಿಂ ಲೀಗ್ ಎಂಬ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಿದ್ದು, ಇದನ್ನು ನೋಂದಾಯಿಸಿಕೊಳ್ಳಲು ಪಾಕಿಸ್ತಾನದ ಚುನಾವಣಾ ಆಯೋಗ ತಿರಸ್ಕರಿಸಿದೆ.

Comments are closed.