ಅಂತರಾಷ್ಟ್ರೀಯ

ತರಕಾರಿ ಕಂಡು ಬಾಂಬ್‌ ಎಂದ ರೈತ!

Pinterest LinkedIn Tumblr


ಕಾರ್ಲ್ಸುಹ : ಜೆರ್ಮನಿಯ ಕಾರ್ಲ್ಸುಹ ನಗರದ 81 ವರ್ಷದ ಹಿರೀಯ ನಾಗರೀಕರೊಬ್ಬರು ತರಕಾರಿಯೊಂದನ್ನು ಕಂಡು ಎರಡನೇ ವಿಶ್ವ ಯುದ್ಧದ ಬಾಂಬ್‌ ದೊರಕಿರುವುದಾಗಿ ಹೇಳಿ ಕೆಲ ಕಾಲ ಭಯದ ವಾತಾವರಣ ನಿರ್ಮಿಸಿದ ಘಟನೆ ನಡೆದಿದೆ.

ಗುರುವಾರದಂದು 81 ವರ್ಷದ ಈ ಹಿರೀಯ ವ್ಯಕ್ತಿ ಪೊಲೀಸರಿಗೆ ಕರೆ ಮಾಡಿ ತನ್ನ ಹೊಲದಲ್ಲಿ ಎರಡನೇ ಮಹಾ ಯುದ್ಧದ ಬಾಂಬ್‌ವೊಂದು ಪತ್ತೆಯಾಗಿದೆ ಎಂದು ಹೇಳಿದ್ದಾನೆ. ಗಾಬರಿಗೊಂಡ ಪೊಲೀಸರು ಕೂಡಲೇ ಆತನ ಮನೆಗೆ ದಾವಿಸಿದ್ದಾರೆ. ಪರಿಶೀಲನೆ ವೇಳೆ ಇದೊಂದು ಝುಕಿನಿ (Zucchini: ಸೌತೆ ಅಥವಾ ಸಿಹಿಕುಂಬಳ ಕಾಯಿ ಮಾದರಿಯ ಒಂದು ತರಕಾರಿ) ಎಂದು ಗೊತ್ತಾಗಿದೆ.

ಈತ ಕರೆ ಮಾಡಿದ ಬೆನ್ನಲ್ಲೇ ಈ ಸುದ್ದಿ ನಗರದಾದ್ಯಂತ ಹರಡಿ ಆತನ ಮನೆಯ ಸುತ್ತ ಜನಸ್ತೋಮವೇ ನೆರೆದಿತ್ತು. ಕಾರ್ಲ್ಸುಹ ಪೊಲೀಸರು ಕೂಡಲೇ ಚಿತ್ರ ಸಮೇತ ಬಾಂಬ್‌ಫೌಂಡ್‌ ಎಂದು ಅಡಿ ಬರಹವಿತ್ತು ಸಾಮಾಜಿಕ ಜಾಲತಾಣದಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ.

ಇಷ್ಟೆಲ್ಲಾ ಘಟನೆಗೆ ಕಾರಣವಾದ 81ರ ವ್ಯಕ್ತಿಯನ್ನು ದೂಷಿಸಿ ಏನೂ ಪ್ರಯೋಜನವಿಲ್ಲ. ಏಕೆಂದರೆ ಆ ತರಕಾರಿ ಹೆಚ್ಚೆಂದರೆ 10 ಇಂಚಿನಷ್ಟು ಉದ್ದ ಬೆಳೆಯುತ್ತದೆ. ಹೀಗಾಗಿ 16 ಇಂಚಿನ ಝಕಿನಿ ಕಂಡು ಬೆಚ್ಚಿ ಬೀಳುವುದರಲ್ಲಿ ತಪ್ಪೇನಿಲ್ಲ ಎಂದು ಪೊಲೀಸರೇ ಸಮಾಧಾನ ಮಾಡಿಕೊಂಡಿದ್ದಾರೆ.

Comments are closed.