ಅಂತರಾಷ್ಟ್ರೀಯ

2 ವರ್ಷದಲ್ಲಿ ಇಂಗಾಲ ಪ್ರಮಾಣ ಏರಿಕೆ: 3 ಡಿಗ್ರಿ ತಾಪಮಾನ ಹೆಚ್ಚಳ

Pinterest LinkedIn Tumblr


ಜಿನಿವಾ: ಜಾಗತಿಕ ಮಟ್ಟದಲ್ಲಿಯೂ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. 2016ರಲ್ಲಿ ಅತಿ ಹೆಚ್ಚು ಇಂಗಾಲ ಡೈ ಆಕ್ಸೈಡ್‌ ಪ್ರಮಾಣ ಪರಿಸರದಲ್ಲಿ ಸೇರಿದೆ.

ಇದರಿಂದಾಗಿ ಜಾಗತಿಕ ತಾಪಮಾನ ಏರಿಕೆಯಾಗಿದೆ. ಸಮುದ್ರ ಮಟ್ಟದಲ್ಲಿಯೂ ಕೆಲವು ಬದಲಾವಣೆಗಳಾಗಿವೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

2015ರಲ್ಲಿ ಇಂಗಾಲ ಪ್ರಮಾಣ 400.0 ಪಿಪಿಎಂ (ಪಾರ್ಟ್ಸ್‌ ಪರ್ ಮಿಲಿಯನ್‌) ಇತ್ತು. ಆದರೆ 2016ರಲ್ಲಿ ಇದರ ಪ್ರಮಾಣ 403.3 ಪಿಪಿಎಂ (ಪಾರ್ಟ್ಸ್‌ ಪರ್ ಮಿಲಿಯನ್‌) ಆಗಿದೆ ಎಂದು ವಿಶ್ವಸಂಸ್ಥೆಯ ವಿಶ್ವ ಭೂ ವಿಜ್ಞಾನ ಸಂಸ್ಥೆಯ ವಾರ್ಷಿಕ ಗ್ರೀನ್‌ ಹೌಸ್‌ ಗ್ಯಾಸ್‌ ವರದಿಯಲ್ಲಿ ತಿಳಿಸಲಾಗಿದೆ.

ಇಂಗಾಲ ಪ್ರಮಾಣ ಸೇರ್ಪಡೆ ಹಿಂದೆಂದಿಗಿಂತಲೂ ಹೆಚ್ಚು ವೇಗವಾಗಿದೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಳೆದ ಎರಡು ವರ್ಷದಲ್ಲಿ ಪರಿಸರ ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮುಂದಿನ ತಿಂಗಳು ಬಾನ್‌ನಲ್ಲಿ ಜಾಗತಿಕ ಮಟ್ಟದ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಜಾಗತಿಕ ತಾಪಮಾನ ಕುರಿತು ಪ್ರಮುಖ ಚರ್ಚೆಯಾಗುವ ಸಾಧ್ಯತೆ ಇದೆ. ಜಾಗತಿಕ ತಾಪಮಾನ ಕುರಿತಂತೆ ಪ್ಯಾರಿಸ್‌ ನಿರ್ಣಯಕ್ಕೆ ಬಹುತೇಕ ಎಲ್ಲ ದೇಶಗಳು ಸಹಿ ಹಾಕಿವೆ. ಆದರೆ ಅದಿನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಆದರೆ ಅಮೆರಿಕ ಇದರಿಂದ ಹಿಂದೆ ಸರಿಯುವ ಬೆದರಿಕೆ ಒಡ್ಡಿದ್ದು ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ.

Comments are closed.