ಅಂತರಾಷ್ಟ್ರೀಯ

ಮಗನ ಗರ್ಲ್​ಫ್ರೆಂಡ್’ನಂತೆ ಕಾಣುವ ಈ ತಾಯಿಯ ಸೀಕ್ರೆಟ್ ಏನು…?

Pinterest LinkedIn Tumblr

ಯಾರಿಗೆ ತಾನೆ ತಮ್ಮ ವಯಸ್ಸಿಗಿಂತ ಚಿಕ್ಕವರಾಗಿ ಕಾಣಿಸಿಕೊಳ್ಳುವ ಆಸೆ ಇರುವುದಿಲ್ಲ ಹೇಳಿ. ಆದರೆ ಅದು ಎಲ್ಲರಿಂದಲೂ ಸಾಧ್ಯವಿಲ್ಲ. ಮದುವೆಯಾಗಿ ಒಂದು ಮಗುವಾಗುತ್ತಿದ್ದಂತೆ ಕೆಲವರು ದಪ್ಪವಾಗಿ ಬಿಡುತ್ತಾರೆ. ಆದರೆ, ಇಂಡೋನೇಷ್ಯಾದ ಜಕಾರ್ತನಲ್ಲಿರುವ ಪುಷ್ಪಾ ದೇವಿ ಇದಕ್ಕೆ ತದ್ವಿರುದ್ಧ. ಅವರನ್ನು ನೋಡಿದವರೆಲ್ಲರೂ ಅವರ ಮಗನ ಗರ್ಲ್ ಫ್ರೆಂಡ್ ಎಂದೇ ಭಾವಿಸುತ್ತಾರಂತೆ. ಆದರೆ ಪುಷ್ಪಾ ಅವರಿಗೆ ಬರೋಬ್ಬರಿ 50 ವರ್ಷ.

ಪುಷ್ಪಾದೇವಿ ಯೂಟ್ಯೂಬ್ ಚಾನೆಲ್ ಹಾಡಿ ಜೆನೆಟಿಕ್ಸ್​ನಲ್ಲಿ ಉದ್ಯಮಿ ಯಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳು. ಇಂಡೋನೇಷಿಯಾದ ಟಿವಿ ಒಂದರಲ್ಲಿ ಕಾರ್ಯಕ್ರಮ ನಡೆಸಿಕೊಡುವ ಪುಷ್ಪಾರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನನಗೆ ವಯಸ್ಸಾದಷ್ಟು ನಾನು ಯುವತಿಯಾಗಿ ಕಾಣಿಸುತ್ತೇನೆ ಎಂದು ಎಲ್ಲರೂ ಹೇಳುತ್ತಾರೆ.

ಅದು ನಿಜವಿರಬೇಕು. ಯಾಕೆಂದರೆ ಈಗ ನಾನು ತುಂಬಾ ಸಂತೋಷವಾಗಿದ್ದೇನೆ. ಮಕ್ಕಳಿಬ್ಬರು ಬೆಳೆದಿದ್ದಾರೆ. ನನ್ನ ಉದ್ಯೋಗದಲ್ಲಿ ಯಶಸ್ಸು ಕಂಡಿದ್ದೇನೆ. ಹಾಗಾಗಿ ಯಾವಾಗಲೂ ಸಂತೋಷ ವಾಗಿರುತ್ತೇನೆ ಎಂದು ಬ್ಯೂಟಿ ಸೀಕ್ರೆಟ್ ಬಗ್ಗೆ ಸಂದರ್ಶನವೊಂದರಲ್ಲಿ ಪುಷ್ಪಾ ಹೇಳಿದ್ದಾರೆ. ಅಲ್ಲದೇ, ಪ್ರತಿದಿನ ತಪ್ಪದೇ ಏರೋಬಿಕ್ಸ್, ಈಜು, ಬ್ಯಾಡ್ಮಿಂಟನ್ ಅಭ್ಯಾಸ ಮಾಡುತ್ತಾರಂತೆ. ಇವರ ಅಂದ ಚೆಂದಕ್ಕೆ ಮನಸೋತ 2,50,000 ಜನ ಇವರನ್ನು ಇನ್ಸ್​ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿದ್ದಾರೆ.

Comments are closed.