ಕರ್ನಾಟಕ

ಲಿಂಗಾಯತ ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟದ ಬಗ್ಗೆ ಪೇಜಾವರ ಶ್ರೀ ಸಲಹೆ ಬೇಡ: ನಿಜಗುಣಾನಂದ

Pinterest LinkedIn Tumblr

ಧಾರವಾಡ: ಸ್ವತಂತ್ರ ಲಿಂಗಾಯತ ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಪೇಜಾವರ ಶ್ರೀಗಳ ಹೇಳಿಕೆಗೆ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದು, ಮೂರು ಸಾವಿರ ವಿರಕ್ತ ಮಠಾಧೀಶರು ಹಾಗೂ ಮೂರೂವರೆ ಕೋಟಿ ಲಿಂಗಾಯತ ಸಮುದಾಯ ಹೊಂದಿರುವ ತಮಗೆ ಧರ್ಮದ ಹೋರಾಟದಲ್ಲಿ ಪೇಜಾವರ ಶ್ರೀಗಳ ಮಾರ್ಗದರ್ಶನ ಬೇಡ ಎಂದಿದ್ದಾರೆ.

ನಮ್ಮನ್ನು ಬಿಟ್ಟು ಬೇರೆ ಹೋಗಬೇಡಿ, ಲಿಂಗಾಯತ ವೀರಶೈವರು ಹಿಂದೂಗಳು ಎಂದು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಪೇಜಾವರ ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದರು.

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ಬಗ್ಗೆ ಮಾತನಾಡಿದ್ದ ಅವರು, ಅವರ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಹೊರಗಿನವನಾಗಿ ಸಲಹೆ ನೀಡುತ್ತಿದ್ದೇನೆ. ನಮ್ಮನ್ನು ಬಿಟ್ಟು ಬೇರೆ ಹೋಗಬೇಡಿ, ಸಹೋದರರಂತೆ ಬಾಳೋಣ. ಲಿಂಗಾಯತರು ಹಿಂದೂಗಳಲ್ಲ ಎಂದರೆ, ಇನ್ಯಾರು ಹಿಂದೂಗಳು.. ಎಂದು ಲಿಂಗಾಯತ ಪ್ರತ್ಯೇಕ ಧರ್ಮವಾದಿಗಳಿಗೆ ಪೇಜಾವರ ಶ್ರೀಗಳ ಪ್ರಶ್ನಿಸಿದ್ದರು.

ಒಂದಾಗಿದ್ದರೆ ಲಿಂಗಾಯತ ಸಮಾಜಕ್ಕೆ ಬಲ. ಬ್ರಾಹ್ಮಣರಿಂದ, ಮಾಧ್ವರಿಂದ ಬಸವಣ್ಣಗೆ ಅನ್ಯಾಯ ಆಗಿಲ್ಲ. ಪ್ರೇಮದ ಸಲಹೆ, ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ಮನವಿ ಮಾಡಿದ್ದರು.

Comments are closed.