ಅಂತರಾಷ್ಟ್ರೀಯ

ಹಫೀಜ್‌ ಸಯೀದ್‌ ಗೃಹ ಬಂಧನ 30 ದಿನ ವಿಸ್ತರಣೆ

Pinterest LinkedIn Tumblr


ಲಾಹೋರ್‌ : ಮುಂಬಯಿ ದಾಳಿಯ ಮಾಸ್ಟರ್‌ ಮೈಂಡ್‌ ಮತ್ತು ನಿಷೇಧಿತ ಜಮಾತ್‌ ಉದ್‌ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ ನ ಗೃಹ ಬಂಧನವನ್ನು ಪಾಕ್‌ ಪಂಜಾಬ್‌ ಪ್ರಾಂತ್ಯದ ನ್ಯಾಯಾಂಗ ಪುನರ್‌ ವಿಮರ್ಶೆ ಮಂಡಳಿಯು ಇನ್ನೂ 30 ದಿನ ವಿಸ್ತರಿಸಿದೆ.

ಆದರೆ ಮಂಡಳಿಯು ಹಫೀಜ್‌ನ ಇನ್ನೂ ನಾಲ್ಕು ಸಹಚರರ ಗೃಹ ಬಂಧನ ವಿಸ್ತರಣೆಗೆ ಒಪ್ಪಿಗೆ ನೀಡಿಲ್ಲ. ಇದರ ಪರಿಣಾಮವಾಗಿ ಅಬ್ದುಲ್ಲಾ ಉಬೇದ್‌, ಮಲಿಕ್‌ ಝಫ‌ರ್‌ ಇಕ್ಬಾಲ್‌, ಅಬ್ದುಲ್‌ ರೆಹಮಾನ್‌ ಅಬೀದ್‌ ಮತ್ತು ಕಾಜಿ ಕಾಶೀಫ್ ಹುಸೇನ್‌ ಗೃಹ ಬಂಧನ ಮುಕ್ತರಾಗುವ ಸಾಧ್ಯತೆ ಇದೆ.

ಹಫೀಜ್‌ ಸಯೀದ್‌ ನ ವಿಸ್ತರಿತ 30 ದಿನಗಳ ಗೃಹ ಬಂಧನ ಅವಧಿಯು ಅಕ್ಟೋಬರ್‌ 24ರಿಂದ ಆರಂಭವಾಗುತ್ತದೆ.

-ಉದಯವಾಣಿ

Comments are closed.