ಮನೋರಂಜನೆ

ಪ್ರಶಸ್ತಿ ಸ್ವೀಕರಿಸಲು ಮಗನ ಜತೆ ಲಂಡನ್‌ನಲ್ಲಿ ದರ್ಶನ್

Pinterest LinkedIn Tumblr


ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬ್ರಿಟನ್‌ ಸಂಸತ್ತು ನೀಡುವ ಪ್ರತಿಷ್ಠಿತ ಗ್ಲೋಬಲ್‌ ಡೈವರ್ಸಿಟಿ ಪ್ರಶಸ್ತಿಗೆ ಪಾತ್ರರಾಗಿರುವುದು ಗೊತ್ತೇ ಇದೆ. ಅ.19ರಂದು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದು, ಲಂಡನ್‌ ಪಾರ್ಲಿಮೆಂಟ್‌ನಲ್ಲಿ ಗುರುವಾರ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲು ಈಗಾಗಲೆ ಲಂಡನ್‌ನ ತಲುಪಿದ್ದಾರೆ.

ಜಾಗತಿಕ ಮಟ್ಟದ ಪ್ರಶಸ್ತಿಯಿಂದ ಅತೀವ ಸಂತಸಗೊಂಡಿರುವ ದರ್ಶನ್‌, ಇದೊಂದು ದೊಡ್ಡ ಗೌರವ ಆಗಿದೆ. ಇದನ್ನು ಕನ್ನಡಿಗರು ಹಾಗೂ ನನ್ನ ಅಭಿಮಾನಿಗಳಿಗೆ ಅರ್ಪಿಸುತ್ತೇನೆ ಎಂದಿದ್ದಾರೆ. ವಿಶೇಷ ಏನೆಂದರೆ ದರ್ಶನ್ ತಮ್ಮ ಪುತ್ರ ವಿನೀಶ್‌ರನ್ನೂ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕರೆದೊಯ್ದಿರುವುದು. ಅದಕ್ಕೆ ಸಂಬಂಧಿಸಿದ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ ದರ್ಶನ್.

ಬ್ರಿಟಿಷ್‌ ಹೌಸ್‌ ಆಫ್‌ ಕಾಮನ್ಸ್‌ ಸದಸ್ಯ ವೀರೆಂದ್ರ ಶರ್ಮ ಮತ್ತು ಇಂಡೋ-ಬ್ರಿಟಿಷ್‌ ಆಲ್‌ ಪಾರ್ಟಿ ಪಾರ್ಲಿಮೆಂಟರಿ ಗ್ರೂಪ್‌ ದರ್ಶನ್‌ರನ್ನು ಈ ಗೌರವ ಸ್ವೀಕರಿಸಲು ಲಂಡನ್‌ಗೆ ಆಹ್ವಾನಿಸಿದೆ. ಈ ಸಂದರ್ಭದಲ್ಲಿ ಕರ್ನಾಟಕ ಬಿಸ್ನೆಸ್‌ ಛೇಂಬರ್‌ ಕೂಡ ದರ್ಶನ್‌ಗೆ ಸನ್ಮಾನ ಏರ್ಪಡಿಸಿದೆ. ಇಲ್ಲಿ ಕನ್ನಡ ಚಿತ್ರರಂಗದಲ್ಲಿ ಇರುವ ವಾಣಿಜ್ಯ ಸಾಧ್ಯತೆಗಳ ಬಗ್ಗೆ ಚರ್ಚಿಸಲು ದರ್ಶನ್‌ ಬಯಸಿದ್ದಾರೆ.
All set to make it to the Event in London Along with my Son Vineesh pic.twitter.com/c3LLWheXCj
— Darshan Thoogudeepa (@dasadarshan) October 19, 2017
2013ರಲ್ಲಿ ಅಮಿತಾಬ್‌ ಬಚ್ಚನ್‌, ಕಳೆದ ಸೆಪ್ಟೆಂಬರ್‌ನಲ್ಲಿ ಸಲ್ಮಾನ್‌ ಖಾನ್‌, ನಟಿ ಐಶ್ವರ್ಯ ರೈಬಚ್ಚನ್‌, ಶಾರುಖ್‌ ಖಾನ್‌, ಚೀನಾ ನಟ ಜಾಕಿ ಚಾನ್‌, ಬಾಂಗ್ಲಾ ದೇಶದ ಪ್ರಧಾನಿ ಶೇಖ್‌ ಹಸೀನಾ, ಅಮೆರಿಕ ನಾಗರಿಕ ಹಕ್ಕು ಹೋರಾಟಗಾರ ಜೆಸ್ಸಿ ಜಾಕ್ಸನ್‌ ಮತ್ತು ಫಾರ್ಮುಲಾ ಒನ್‌ ಚಾಲಕ ಲೆವಿಸ್‌ ಹ್ಯಾಮಿಲ್ಟನ್‌ ಈ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

Comments are closed.