ಅಂತರಾಷ್ಟ್ರೀಯ

ಫೇಸ್’ಬುಕ್’ನಿಂದಲೇ ಜುಕರ್ಬರ್ಗ್ ರನ್ನು ಹೊರದಬ್ಬುವ ಪ್ರಯತ್ನ!

Pinterest LinkedIn Tumblr


ಸ್ಯಾನ್‌ ಫ್ರಾನ್ಸಿಸ್ಕೋ(ಫೆ.08): ಜಗತ್ತಿನ ಪ್ರಸಿದ್ಧ ಆನ್‌ಲೈನ್ ಸಾಮಾಜಿಕ ಜಾಲತಾಣ ೇಸ್‌ಬುಕ್‌ನ ನಿರ್ದೇಶಕ ಮಂಡಳಿಯಿಂದ ಆ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರನ್ನೇ ಹೊರದಬ್ಬುವ ಪ್ರಯತ್ನವೊಂದು ಆರಂಭವಾಗಿದೆ.
ಮಾರ್ಕ್ ಜುಕರ್‌ಬರ್ಗ್ ಅವರು ಸಿಇಒ ಹಾಗೂ ನಿರ್ದೇಶಕ ಮಂಡಳಿಯ ಸ್ಥಾನ ಎರಡನ್ನೂ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಕಂಪನಿಯ ಆಡಳಿತ ದುರ್ಬಲವಾಗಲಿದ್ದು, ಷೇರುದಾರರ ವೌಲ್ಯದ ಮೇಲೆ ಪರಿಣಾಮವಾಗಲಿದೆ ಎಂಬ ಕಾರಣ ನೀಡಿ ಜುಕರ್‌ಬರ್ಗ್ ಅವರನ್ನು ಕೆಳಗಿಳಿಸುವ ಪ್ರಸ್ತಾವವನ್ನು ಷೇರುದಾರರು ಮುಂದಿಟ್ಟಿದ್ದಾರೆ.
ವಿಶೇಷ ಎಂದರೆ, ಈ ಪ್ರಸ್ತಾವ ಇಟ್ಟಿರುವ ಷೇರುದಾರರು ಗ್ರಾಹಕರ ಕಾವಲುನಾಯಿಯಂತೆ ಕೆಲಸ ಮಾಡುವ ಆನ್‌ಲೈನ್ ತಾಣ ‘ಸಮ್‌ಅಸ್’ನ ಸದಸ್ಯರು.
ಆದರೆ ಜುಕರ್‌ಬರ್ಗ್ ಅವರು ಕಂಪನಿಯ ಬಹುಪಾಲು ಷೇರು ಹೊಂದಿದ್ದಾರೆ. ಅವರ ಅವಯಲ್ಲಿ ಕಂಪನಿ ಭಾರಿ ಪ್ರಗತಿ ಕಂಡಿದೆ. ಲಾಭಾಂಶವೂ ಅಪಾರ ಏರಿಕೆಯಾಗಿದೆ. ಹೀಗಾಗಿ ಷೇರುದಾರರ ಈ ಪ್ರಯತ್ನ ಕೈಗೂಡುವುದಿಲ್ಲ ಎಂದು ಹೇಳಲಾಗಿದೆ.

Comments are closed.