ರಾಷ್ಟ್ರೀಯ

ಯೋಧ ತೇಜ್ ರನ್ನು ಗೃಹಬಂಧನವಿದಿಸಿಲ್ಲ, ಬೇರೆಡೆಗೆ ವರ್ಗಾವಣೆ: ಗೃಹ ಇಲಾಖೆ

Pinterest LinkedIn Tumblr

ನವದೆಹಲಿ (ಫೆ.10): ಸೇನೆಯಲ್ಲಿ ಕಳಪೆ ಆಹಾರ ನೀಡುತ್ತಾರೆಂದು ದೂರು ನೀಡಿದ್ದ ಬಿಎಸ್ ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ರನ್ನು ಬಂಧಿಸಿಲ್ಲ ಬದಲಿಗೆ ಬೇರೊಂದು ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಗೃಹಸಚಿವಾಲಯವು ದೆಹಲಿ ನ್ಯಾಯಾಲಯಕ್ಕೆ ತಿಳಿಸಿದೆ.

ಸೇನೆ ಯಲ್ಲಿ ಕಳಪೆ ಆಹಾರ ನೀಡುತ್ತಾರೆಂದು ಆರೋಪಿಸಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಇದು ವೈರಲ್ ಆಗಿತ್ತು. ಅದಾದ ಬಳಿಕ ಬಹದ್ದೂರು ಹೆಂಡತಿ ಶರ್ಮಿಲಾ, 3 ದಿನಗಳಿಂದ ನನ್ನ ಗಂಡ ಸಂಪರ್ಕಕ್ಕೆ ಸಿಗುತ್ತಿಲ್ಲವೆಂದು ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದರು. ಯಾಕೆ ಶರ್ಮಿಳಾರವರಿಗೆ ತನ್ನ ಗಂಡನ ಭೇಟಿಗೆ ಅವಕಾಶ ನೀಡುತ್ತಿಲ್ಲವೆಂದು ಕೋರ್ಟ್ ಪ್ರಶ್ನಿಸಿತ್ತು.
ಇದೀಗ ಗೃಹಸಚಿವಾಯವು ಬಹದ್ದೂರ್ ರವರನ್ನು ಬಂಧಿಸಿಲ್ಲ, ಬೇರೋಂದು ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.

Comments are closed.