ರಾಷ್ಟ್ರೀಯ

ಅತ್ಯಾಚಾರಿಗಳು ಕ್ಷಮಾಪಣೆಗಾಗಿ ಬೇಡುವ ತನಕ ಕಿರುಕುಳ ನೀಡಿ: ಉಮಾ ಭಾರತಿ

Pinterest LinkedIn Tumblr

ಆಗ್ರಾ: ಅತ್ಯಾಚಾರಿಗಳು ಸಂತ್ರಸ್ತರ ಎದುರು ಕ್ಷಮಾಪಣೆಗಾಗಿ ಬೇಡಿಕೊಳ್ಳುವವರೆಗೂ ಪೊಲೀಸರು ಅವರಿಗೆ ಕಿರುಕುಳ ನೀಡಬೇಕು ಎಂದು ಸಂಸದೆ ಹಾಗೂ ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ಹೇಳಿದ್ದಾರೆ.

ಉತ್ತರ ಪ್ರದೇಶ ಚುನಾವಣಾ ಪ್ರಚಾರ ಸಂದರ್ಭ ಶುಕ್ರವಾರ ಆಗ್ರಾದಲ್ಲಿ ಭಾಷಣ ಮಾಡಿದ ಅವರು, ‘ದೇಶದಲ್ಲಿ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಳವಾಗುತ್ತಿವೆ. ನಾನು ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅತ್ಯಾಚಾರಿಗಳಿಗೆ ಸಂತ್ರಸ್ತರ ಎದುರು ಕಿರುಕುಳ ನೀಡಿ, ಅವರು ಸಂತ್ರಸ್ತರ ಬಳಿ ಕ್ಷಮಾಪಣೆಗಾಗಿ ಅಂಗಲಾಚಿ ಬೇಡಿಕೊಳ್ಳುವವರೆಗೂ ಶಿಕ್ಷಿಸಿ ಎಂದು ಪೊಲೀಸರಿಗೆ ಆದೇಶಿಸಿದ್ದೆ’ ಎಂದು ಹೇಳಿದ್ದಾರೆ.

ಮುಂದುವರಿದು, ‘ಆ ವೇಳೆ ಮಾನವ ಹಕ್ಕುಗಳ ಹೋರಾಟಗಾರರು ನನಗೆ ಮಾನವ ಹಕ್ಕು ಉಲ್ಲಂಘನೆ ಮಾಡುತ್ತಿರುವುದಾಗಿ ಎಚ್ಚರಿಕೆಯನ್ನೂ ನೀಡಿದ್ದರು. ಅದಕ್ಕೆ ನಾನು ಮಾನವ ಹಕ್ಕುಗಳಿರುವುದು ಮಾನುಷ್ಯರಿಗಾಗಿ. ಅತ್ಯಾಚಾರಿಗಳು ರಾಕ್ಷಸರು ಎಂದು ತಿರುಗೇಟು ನಿಡಿದ್ದೆ’ ಎಂದು ಹೇಳಿಕೊಂಡಿದ್ದಾರೆ.

ಸೀಮಿತ ದಾಳಿಯ ಬಗ್ಗೆಯೂ ಮಾತನಾಡಿರುವ ಅವರು, ಪಾಕಿಸ್ತಾನ ಮೇಲಿನ ಸೀಮಿತ ದಾಳಿಯನ್ನು ಪ್ರಶ್ನಿಸುವವರು ಪಾಕಿಸ್ತಾನಕ್ಕೆ ಹೋಗಿ ನೆಲೆಸಲಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

Comments are closed.