ಅಂತರಾಷ್ಟ್ರೀಯ

ರಕ್ತದೊತ್ತಡ ಕಡಿಮೆ ಮಾಡುವ ನೈಸರ್ಗಿಕ ವಿಧಾನಗಳು!

Pinterest LinkedIn Tumblr


ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ರಕ್ತದೊತ್ತಡ ಸಮಸ್ಯೆ ಸರ್ವೇ ಸಾಮಾನ್ಯ. ಔಷಧಿ ತಿಂದರೆ ಬೇರೆ ಇನ್ನೇನೋ ಅಡ್ಡ ಪರಿಣಾಮ ಬೀರುತ್ತದೆ ಎಂಬ ಆತಂಕವಿದ್ದರೆ, ನೈಸರ್ಗಿಕವಾಗಿ ಇದನ್ನು ಹತೋಟಿಯಲ್ಲಿಡಲು ಹಲವು ಉಪಾಯಗಳಿವೆ.

ಮುಖ್ಯವಾಗಿ ದೇಹಕ್ಕೆ ಸಾಕಷ್ಟು ವ್ಯಾಯಾಮ ಒದಗಿಸುವುದು. ಬೆಳಗ್ಗೆ ಮತ್ತು ಸಂಜೆ ಹೊತ್ತು ವಾಕಿಂಗ್ ಮಾಡುವುದು ಉತ್ತಮ. ವ್ಯಾಯಾಮ ಮಾಡುವುದರಿಂದ ಹೃದಯ ಆಮ್ಲಜನಕವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸುತ್ತದೆ.

ಯೋಗ, ಹಾಗೂ ಇನ್ನಿತರ ಮನಸ್ಸಿಗೆ ಶಾಂತಿ ನಿಡುವ ಚಟುವಟಿಕೆ ಮಾಡಿ. ಇಂಪಾದ ಸಂಗೀತ ಕೇಳುವುದು, ಪುಸ್ತಕ ಓದುವುದು ಮುಂತಾದ ಹವ್ಯಾಸ ಬೆಳೆಸಿಕೊಳ್ಳಿ. ಸಂಗಾತಿ ಅಥವಾ ಸ್ನೇಹಿತರ ಬಳಿ ಮುಕ್ತವಾಗಿ ಮಾತನಾಡಿ.

ಇದಲ್ಲದೆ, ಪೊಟೇಶಿಯಂ ಅಂಶ ಹೆಚ್ಚಿರುವ ಆಹಾರ, ತರಕಾರಿಗಳನ್ನು ಸೇವಿಸಬೇಕು. ಸಿಹಿ ಗೆಣಸು, ಟೊಮೆಟೊ, ಕಿತ್ತಳೆ, ಆಲೂ ಗಡ್ಡೆ, ಬಾಳೆ ಹಣ್ಣು ಬಟಾಣಿ ಕಾಳಿನಂತಹ ಪದಾರ್ಥಗಳನ್ನು ಹೆಚ್ಚು ಸೇವಿಸಿದರೆ ದೇಹಕ್ಕೆ ಸಾಕಷ್ಟು ಪೊಟೇಶಿಯಂ ಅಂಶ ಸಿಗುತ್ತದೆ.

ಹೆಚ್ಚು ಉಪ್ಪು ಹಾಗೂ ಉಪ್ಪಿನ ಅಂಶವಿರುವ ಆಹಾರ ವಸ್ತುಗಳನ್ನು ಸೇವಿಸದೇ ಇರುವುದು ಅತೀ ಮುಖ್ಯ. ಸೋಡಿಯಂ ಅಂಶ ದೇಹಕ್ಕೆ ಹೆಚ್ಚು ಸೇರಿದಷ್ಟು ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಇನ್ನೊಂದು ಪ್ರಮುಖ ಅಂಶವೆಂದರೆ ತುಂಬಾ ಒತ್ತಡವಿರುವ ಕೆಲಸ ಮಾಡಬೇಡಿ. ಮಾನಸಿಕ ಒತ್ತಡ ಪ್ರಮುಖವಾಗಿ ರಕ್ತದೊತ್ತಡ ಹೆಚ್ಚುವುದಕ್ಕೆ ಕಾರಣವಾಗುತ್ತದೆ.

Comments are closed.