ರಾಷ್ಟ್ರೀಯ

ಮಸಾಜ್ ನೆಪದಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ!

Pinterest LinkedIn Tumblr

ಗೋವಾ: ಮಸಾಜ್ ಮಾಡುವ ನೆಪದಲ್ಲಿ ಅಮೆರಿಕಾ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಯೋಗ ಶಿಕ್ಷಕನನ್ನು ಬಂಧಿಸಲಾಗಿದೆ.
ಗೋವಾದಿಂದ ಸ್ವಲ್ಪ ದೂರವಿರುವ ಗ್ರಾಮವೊಂದರಲ್ಲಿ ಪ್ರತೀಕ್ ಕುಮಾರ್ ಅಗರ್ ವಾಲ್ ಎಂಬಾತ ಫೆಬ್ರವರಿ 2 ರಂದು ಮಹಿಳೆಗೆ ಮಸಾಜ್ ಮಾಡುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆಂದು ದೂರು ನೀಡಿದ್ದಾರೆ.
ದೂರಿನ ಅನ್ವಯ ಪೊಲೀಸರು ಯೋಗಗುರುವನ್ನು ಬಂಧಿಸಿದ್ದಾರೆ. ಜೊತೆಗೆ ಮತ್ತೊಬ್ಬ ಕೆನಡಿಯನ್ ಮಹಿಳೆಗೆ ಕಿರುಕುಳ ನೀಡಿದ್ದಾನೆಂದು ಆರೋಪಿಸಿದ್ದಾರೆ.

Comments are closed.