ಮನೋರಂಜನೆ

ಆ ದಿನಗಳನ್ನು ತುಂಬಾ ಮಿಸ್ ಆಗುತ್ತಿದ್ದೇನೆ ಎಂದ ನಟಿ

Pinterest LinkedIn Tumblr


ಶ್ರೀಲಂಕಾ ಚೆಲುವೆ ಜಾಕ್ವೆಲಿನ್ ಫರ್ನಾಂಡೀಸ್ ಈಗ ಬಾಲಿವುಡ್‍ನಲ್ಲಿ ಬಿಜಿಯಾಗಿರುವ ತಾರೆ. ವರುಣ್ ಧವನ್ ಆಕ್ಷನ್ ಕಟ್ ಹೇಳುತ್ತಿರುವ ಜುಡ್ವಾ 2 ಚಿತ್ರದಲ್ಲಿ ಅಭಿನಯಿಸುತ್ತಿರುವ ಜಾಕ್ವೆಲಿನ್, ಸಿದ್ದಾರ್ಥ್ ಮಲ್ಹೋತ್ರಾ ಜತೆಗೆ ರೀಲೋಡ್… ಸುಶಾಂತ್ ಸಿಂಗ್ ರಾಜ್‍ಪೂತ್ ಜತೆಗೆ ಇನ್ನೊಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ನಟಿಯಾಗಬೇಕೆಂಬ ತನ್ನ ಕನಸು ನೆರವೇರಿದ್ದಕ್ಕೆ ತುಂಬಾ ಖುಷಿಯಾಗಿದೆ. ಆದರೆ ತಾನು ಈ ಹಿಂದೆ ಪತ್ರಕರ್ತೆಯಾಗಿ ಕೆಲಸ ಮಾಡಿದ್ದರಂತೆ. ಆ ದಿನಗಳನ್ನು ಈಗ ಮಿಸ್ ಆಗುತ್ತಿದ್ದೇನೆಂದು ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ ಜಾಕ್ವೆಲಿನ್.

ಶ್ರೀಲಂಕಾದಲ್ಲಿ ಹುಟ್ಟಿ ಬೆಳೆದ ಜಾಕ್ವೆಲಿನ್ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ. ಅಲ್ಲೇ ವರದಿಗಾರ್ತಿಯಾಗಿ ಕೆಲಸ ಮಾಡಿದ್ದರು. ಆ ದಿನಗಳನ್ನು ಜ್ಞಾಪಿಸಿಕೊಂಡಿರುವ ಅವರು, ರಿಪೋರ್ಟ್ ಆಗಿ ಕೆಲಸ ಮಾಡಿದ ದಿನಗಳನ್ನು ಮಿಸ್ ಆಗುತ್ತಿದ್ದೇನೆ. ಯಾಕೆಂದರೆ ಆ ವೃತ್ತಿಯಲ್ಲಿ ಪ್ರತಿದಿನ ಸಾಹಸ ಇರುತ್ತಿತ್ತು.

ತಾಜಾ ಸುದ್ದಿ ಏನು ಎಂದು ತಿಳಿದುಕೊಳ್ಳಬೇಕಾಗಿತ್ತು. ಅದನ್ನು ಸಂಗ್ರಹಿಸಬೇಕಿತ್ತು. ಒಂದು ಟೀಂ ಜತೆಗೆ ಕೆಲಸ ಮಾಡಬೇಕು. ಡಿಟೆಕ್ಟೀವ್ ಕೆಲಸದಂತೆ ಇರುತ್ತಿತ್ತು. ಅದಕ್ಕೇ ಆ ದಿನಗಳನ್ನ್ನು ಬಹಳಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

Comments are closed.