ಅಂತರಾಷ್ಟ್ರೀಯ

7 ಮುಸ್ಲಿಂ ರಾಷ್ಟ್ರಗಳ ಪ್ರಜೆಗಳು ಮೇಲಿನ ವೀಸಾ ನಿರ್ಬಂಧ ವಾಪಸ್ ಪಡೆದ ಟ್ರಂಪ್

Pinterest LinkedIn Tumblr


ವಾಷಿಂಗ್ಟನ್(ಫೆ.05): ಏಳು ಮುಸ್ಲಿಂ ರಾಷ್ಟ್ರಗಳ ಪ್ರಜೆಗಳು ತನ್ನ ದೇಶ ಪ್ರವೇಶಿಸದಂತೆ ಅಮೆರಿಕ ಕೆಲವು ದಿನಗಳ ಹಿಂದೆ ಹೊರಡಿಸಿದ್ದ ವಿವಾದಾತ್ಮಕ ಕಾರ್ಯಕಾರಿ ಆದೇಶವನ್ನು ಹಿಂದಕ್ಕೆ ಪಡೆದಿದೆ.
‘ಅಧ್ಯಕ್ಷ ಟ್ರಂಪ್‌ ಆದೇಶವನ್ನು ಹಿಂಪಡೆದಿದ್ದೇರೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದ್ದಾರೆ. ‘ಯಾವುದೇ ಮುಸ್ಲಿಂ ಪ್ರಜೆಗಳ ವೀಸಾ ಕಾನೂನು ಸಮ್ಮತವಾಗಿದ್ದರೆ ಅವರು ಅಮೆರಿಕದಲ್ಲಿರಬಹುದು’ ಎಂದು ಅವರು ವಿವರಿಸಿದ್ದಾರೆ. ಮುಸ್ಲಿಂ ರಾಷ್ಟ್ರಗಳ  ಪ್ರಜೆಗಳು ಅಮೆರಿಕ ಪ್ರವೇಶಿಸದಂತೆ ಟ್ರಂಪ್ ಅವರು ಹೊರಡಿಸಿದ್ದ ಕಾರ್ಯಕಾರಿ ಆದೇಶಕ್ಕೆ ವಾಷಿಂಗ್ಟನ್ ಫೆಡರ್‌ ಜಡ್ಜ್ ತಾತ್ಕಾಲಿಕ ತಡೆ ನೀಡಿದ್ದರು. ಇದಾದ ನಂತರ ಆದೇಶವನ್ನು ಅಧಿಕಾರಿಗಳು ಅಮಾನತುಪಡಿಸಿದ್ದಾರೆ. ಇದರೊಂದಿಗೆ ಕಾನೂನು ಹೋರಾಟದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಹಿನ್ನಡೆ ಅನುಭವಿಸಿದ್ದಾರೆ.
ಈ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಟ್ರಂಪ್, ಜಡ್ಜ್ ನಿರ್ಧಾರವು ಹಾಸ್ಯಾಸ್ಪದವಾಗಿದ್ದು, ಇದರಿಂದ ಕಾನೂನು ಜಾರಿಗೆ ತೊಡಕಾಗಲಿದೆ. ಇದನ್ನು ಅನೂರ್ಜಿತಗೊಳಿಸಲಾಗುವುದು ಎಂದ ದಿಟ್ಟ ಹೇಳಿಕೆಯನ್ನು ನೀಡಿದ್ದಾರೆ.

Comments are closed.