ರಾಷ್ಟ್ರೀಯ

ಜಯಲಲಿತಾ ಮನೆ ಕೆಲಸದಾಕೆಗೆ ಮುಖ್ಯಮಂತ್ರಿ ಪದವಿ ನೀಡಿ ಎಂದು ಜನ ಮತ ನೀಡಿಲ್ಲ: ಸ್ಟಾಲಿನ್

Pinterest LinkedIn Tumblr


ಚೆನ್ನೈ: ಜಯಲಲಿತಾ ಅವರ ಮನೆ ಕೆಲಸದಾಕೆಗೆ ಮುಖ್ಯಮಂತ್ರಿ ಸ್ಥಾನ ನೀಡಿ ಎಂದು ತಮಿಳು ಜನತೆ ಮತ ನೀಡಲಿಲ್ಲ ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್ ಕಿಡಿಕಾರಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ನಿಧನದ ನಂತರ ಆಡಳಿತಾರೂಢ ಎಐಎಡಿಎಂಕೆ ಪಕ್ಷದಲ್ಲಿ ನಡೆಯುತ್ತಿರುವ ಬದಲಾವಣೆಗಳ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿದ ಸ್ಟಾಲಿನ್, ಈಗಿರುವ ಸರ್ಕಾರವು ಜನಾದೇಶದಿಂದ ರೂಪಗೊಂಡದ್ದು ಅಲ್ಲ.

ಜನರು ಮೇ, 2016ರಲ್ಲಿ ಜಯಲಲಿತಾ ನೇತೃತ್ವದ ಸರ್ಕಾರಕ್ಕೆ ಮತನೀಡಿದ್ದರೇ ಹೊರತು ಪನ್ನೀರ್ ಸೆಲ್ವಂ ಅವರಿಗಾಗಲೀ, ಜಯಲಲಿತಾ ಅವರ ಮನೆ ಕೆಲಸದಾಕೆಗಾಗಲೀ ಅಲ್ಲ ಎಂದು ಸ್ಟಾಲಿನ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ತಮಿಳುನಾಡಿನಲ್ಲಿ ಜವಾಬ್ದಾರಿಯುತ ಪಕ್ಷವಾಗಿರುವ ಡಿಎಂಕೆ ಈ ಎಲ್ಲ ರಾಜಕೀಯ ಬೆಳವಣಿಗೆಗಳನ್ನು ತುಂಬಾ ಹತ್ತಿರದಿಂದ ಗಮನಿಸುತ್ತಿದೆ. ನಾವು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರೂ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿಯೇ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

Comments are closed.