ರಾಷ್ಟ್ರೀಯ

ಕಳೆದೆರಡು ವರ್ಷಗಳಲ್ಲಿ ಮೋದಿ ಭರವಸೆಗಳು ಈಡೇರಿದ್ದು ಅತಿಕಡಿಮೆ!

Pinterest LinkedIn Tumblr


ನವದೆಹಲಿ, ಫೆ. ೫ – ಕಳೆದೆರಡು ವರ್ಷಗಳ ನರೇಂದ್ರ ಮೋದಿ ಸರ್ಕಾರದಲ್ಲಿನ ಸಚಿವರು ನೀಡಿರುವ ಭರವಸೆಗಳ ಸರಮಾಲೆ ದೊಡ್ಡದು; ಆದರೆ ಈಡೇರಿಸಿರುವುದು ಅತಿ ಕಡಿಮೆ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.

ಸಚಿವರು ಸಂಸತ್ತಿನಲ್ಲಿ ನೀಡಿದ ಭರವಸೆ ಪೈಕಿ ಮೂರನೇ ಒಂದು ಭಾಗ ಮಾತ್ರ ಈಡೇರಿದ್ದು, ಐದನೇ ಒಂದು ಭಾಗವನ್ನು ಕೈಬಿಟ್ಟಿರುವುದಾಗಿ ಅಧಿಕೃತ ಅಂಕಿ – ಅಂಶಗಳು ತಿಳಿಸಿವೆ.

2015 – 16 ರಲ್ಲಿ ಸಚಿವರು 1877 ಭರವಸೆ ನೀಡಿದ್ದು, ಕೇವಲ 552ನ್ನು ಕಾರ್ಯಾಗತಗೊಳಿಸಲಾಗಿದೆ. 392 ಭರವಸೆಗಳನ್ನು ತಿರಸ್ಕರಿಸಿದ್ದು, 893 ಭರವಸೆಗಳು ಇನ್ನೂ ಈಡೇರಬೇಕಾಗಿದೆ.

ಮುಖ್ಯವಾಗಿ ಈ ಭರವಸೆಗಳನ್ನು ಸಂಬಂಧಪಟ್ಟ ಸಚಿವಾಲಯಗಳು ಅಥವಾ ಇಲಾಖೆಗಳು ಈಡೇರಿಸಬೇಕಾಗಿದ್ದು, ಆದರೆ ಇದರಲ್ಲಿನ ವೈಯಕ್ತಿಕ ಭರವಸೆಗಳನ್ನು ಸಚಿವಾಲಯಗಳು ಪರಿಶೀಲಿಸುವುದಿಲ್ಲ.

ಭರವಸೆಗಳನ್ನು 3 ತಿಂಗಳ ಕಾಲಮಿತಿಯಲ್ಲಿ ಪೂರೈಸಬೇಕಾಗಿದ್ದು, ಇದನ್ನು ಖಡಾಖಂಡಿತವಾಗಿ ಪಾಲಿಸಬೇಕೆಂಬ ಸೂಚನೆಯಿದ್ದರೂ ಕಾಲಮಿತಿಗೆ ಯಾರೂ ಬದ್ಧರಾದಂತಿಲ್ಲ.

ಪಾರ್ಲಿಮೆಂಟರಿ ವ್ಯವಹಾರಗಳ ಸಚಿವಾಲಯ ಈ ಸಂಬಂಧ ವಿವಿಧ ಇಲಾಖೆಗಳ ವಿಮರ್ಶಾ ಸಭೆಗಳನ್ನು ನಡೆಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದಲ್ಲದೆ, 15 ಸಂಸದರ ಸ್ಥಾಯಿ ಸಮಿತಿಯೂ ಆಶ್ವಾಸನೆಗಳ ಈಡೇರಿಕೆಗೆ ಪ್ರಯತ್ನಿಸುತ್ತದೆ. ಆದರೂ ಸಮಸ್ಯೆ ಎಂದಿನಂತೆಯೇ ಮುಂದುವರಿಯುತ್ತಿದೆ.

Comments are closed.