ಅಂತರಾಷ್ಟ್ರೀಯ

ಮಹಿಳಾ ಸಿಬ್ಬಂದಿಗಳ ಉಡುಪಿನ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳಿದ್ದೇನು…?

Pinterest LinkedIn Tumblr

ನವದೆಹಲಿ: ಮಹಿಳಾ ಸಿಬ್ಬಂದಿಗಳು ಮಹಿಳೆಯರಂತೆಯೇ ಉಡುಪು ಧರಿಸಬೇಕು, ಪುರುಷರು ಕಟ್ಟುವ ಟೈಗಳಲ್ಲಿ ಬದಲಾವಣೆ ಮಾಡಬೇಕು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದಾರೆ ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಅವರ ಬಳಿ ಕೆಲಸ ಮಾಡುವ ಮಹಿಳೆಯರು ಮತ್ತು ಪುರುಷರಿಗೆ ಅವರು ಧರಿಸುವ ಬಟ್ಟೆಯ ಬಗ್ಗೆ ಕೆಲವು ಷರತ್ತುಗಳನ್ನು ಹೇಳುತ್ತಾರಂತೆ.

ನೀವು ಸಾರ್ವಜನಿಕ ವ್ಯಕ್ತಿಯಾಗಿ ಹೋಗುವುದಿದ್ದರೆ ಅವರು ಯಾವುದೇ ಉದ್ಯೋಗದಲ್ಲಿರಲಿ ನೀವು ನಿಗದಿತ ನೋಟದಲ್ಲಿರಬೇಕು. ಅತ್ಯಂತ ಸ್ವಚ್ಛವಾಗಿ ಉಡುಪು ಧರಿಸಬೇಕು ಎಂದು ಟ್ರಂಪ್ ಹೇಳುತ್ತಾರೆ ಎಂದು ಅವರೊಂದಿಗೆ ಅನೇಕ ವರ್ಷಗಳಿಂದಿರುವ ವ್ಯಕ್ತಿಯೊಬ್ಬರು ಹೇಳಿರುವುದಾಗಿ ಅಕ್ಸಿಯೊಸ್ ಮಾಧ್ಯಮ ಉಲ್ಲೇಖಿಸಿದೆ.

ಉತ್ತಮ ದೈಹಿಕ ವರ್ತನೆ, ಉತ್ತಮ ನೋಟ, ಕೂದಲನ್ನು ಚೆನ್ನಾಗಿ ಬಾಚಿಕೊಂಡಿರಬೇಕು.
ಮಹಿಳಾ ನೌಕರರು ಜೀನ್ಸ್ ಧರಿಸಿದರೂ ಕೂಡ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಧರಿಸಬೇಕು ಎಂದು ಟ್ರಂಪ್ ವಲಯದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿ ಹೇಳುತ್ತಾರೆ.

ಟ್ರಂಪ್ ವಲಯದ ಮಹಿಳಾ ಪ್ರಚಾರಕರು ಡಾನ್ ಉಡುಪುಗಳನ್ನು ಧರಿಸುತ್ತಾರೆ. ಪುರುಷರು ಕೂಡ ಇದಕ್ಕೆ ಹೊರತಲ್ಲ, ಅವರಿಗೆ ಕಡ್ಡಾಯವಾಗಿ ಟೈ ಧರಿಸಲು ಹೇಳಲಾಗಿದೆ. ಟ್ರಂಪ್ ಟೈಯಲ್ಲದಿದ್ದರೂ ಬ್ರೂಕ್ಸ್ ಬ್ರದರ್ಸ್ ಟೈಯನ್ನು ಕಟ್ಟಬಹುದಾಗಿದೆ.

Comments are closed.