ಅಂತರಾಷ್ಟ್ರೀಯ

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಜುಕರ್’ಬರ್ಗ್ ಸ್ಪರ್ಧೆ?

Pinterest LinkedIn Tumblr


ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಅಧಿಕಾರ ಸ್ವೀಕರಿಸಿದ ಮಾರನೇ ದಿನವೇ, 2020ರಲ್ಲಿ ನಡೆಯಲಿರುವ ಮುಂದಿನ ಚುನಾವಣೆಯಲ್ಲಿ ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜುಕರ್‌’ಬರ್ಗ್‌ ಅವರು ಅಧ್ಯಕ್ಷೀಯ ಹುದ್ದೆಗೆ ಸ್ಪರ್ಧಿಸಬಹುದು ಎಂಬ ಊಹಾಪೋಹ ಕೇಳಿಬಂದಿದೆ.
2017ರ ವರ್ಷಾರಂಭದ ವೇಳೆ ತಮ್ಮ ಈ ವರ್ಷದ ಗುರಿಗಳೇನು ಎಂದು ಪ್ರಕಟಿಸಿದ್ದ ಜುಕರ್‌’ಬರ್ಗ್‌, ಅದರಲ್ಲಿ ಈ ವರ್ಷ ಅಮೆರಿಕದ ಎಲ್ಲಾ 50 ರಾಜ್ಯಗಳನ್ನು ಸುತ್ತುವ ಗುರಿ ಹೊಂದಿದ್ದೇನೆ. ಈ ವೇಳೆ ಜನರೊಂದಿಗೆ ಸಂವಾದ ನಡೆಸುವ ಮೂಲಕ ಅವರ ಕನಸುಗಳೇನು, ಅವರ ಬದುಕು ಹೇಗಿದೆ ಎಂಬುದನ್ನೆಲ್ಲಾ ತಿಳಿದುಕೊಳ್ಳುವ ಉದ್ದೇಶ ಹೊಂದಿದ್ದೇನೆ ಎಂದು ಹೇಳಿದ್ದರು.
ಅದಾದ ನಂತರದ ದಿನಗಳಲ್ಲಿ ಅವರು ಟೆಕ್ಸಾಸ್‌ ರಾಜ್ಯಕ್ಕೆ ಭೇಟಿ ನೀಡಿದ್ದು, ಈ ವೇಳೆ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಅವರು ಭಾಗವಹಿಸುವ ಕೆಲ ಕಾರ್ಯಕ್ರಮಗಳು ಮತ್ತು ಅಲ್ಲಿ ಅವರು ನಡೆದುಕೊಂಡ ರೀತಿ, ಪಕ್ಕಾ ರಾಜಕೀಯ ಆಸಕ್ತಿ ಹೊಂದಿರುವ ವ್ಯಕ್ತಿಯೊಬ್ಬರ ರೀತಿಯಲ್ಲೇ ಇತ್ತು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.
ಅಮೆರಿಕದ ಅಧ್ಯಕ್ಷರಾಗಲು ಕನಿಷ್ಠ 35 ವರ್ಷ ಆಗಿರಬೇಕು. 2020ಕ್ಕೆ ಜುಕರ್‌’ಬರ್ಗ್‌’ಗೆ 36 ವರ್ಷ ಆಗಿರುತ್ತದೆ. ಹೀಗಾಗಿ ಅವರು 2020ರ ಚುನಾವಣೆ ಮೇಲೆ ಕಣ್ಣಿಟ್ಟಿರಬಹುದು ಎಂದು ಹೇಳಲಾಗಿದೆ.

Comments are closed.