ಅಂತರಾಷ್ಟ್ರೀಯ

ಅಮೆರಿಕಾ: ಗರ್ಭಪಾತ ಪ್ರಮಾಣ ದಾಖಲೆ ಮಟ್ಟಕ್ಕೆ ಇಳಿಕೆ

Pinterest LinkedIn Tumblr


ಮಿಯಾಮಿ: 2014ರ ದಾಖಲೆಯ ಪ್ರಕಾರ ಯುನೈಟೆಡ್ ಸ್ಟೇಟ್ಸ್ ನಲ್ಲಿ ಗರ್ಭಪಾತ ಪ್ರಮಾಣ ಐತಿಹಾಸಿಕವಾಗಿ ಕಡಿಮೆಯಾಗಿದೆ. ಗರ್ಭಪಾತ ಮಾಡಿಸಿಕೊಳ್ಳಲು ಹೇರಿರುವ ನಿಯಮಗಳಿಂದಾಗಿ ಗರ್ಭಪಾತ ಕಡಿಮೆಯಾಗಿದೆ ಎಂದು ಸಂಶೋಧನೆ ತಿಳಿಸಿದೆ.
ನಾನ್ ಪಾರ್ಟಿಸಾನ್ ಗಟ್ ಮ್ಯಾಚರ್ ಇನ್ ಸ್ಟಿಟ್ಯೂಟ್ ನ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸಂಬಧ ಜರ್ನಲ್ ನಲ್ಲಿ ಪ್ರಕಟವಾದ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
1975ರ ನಂತರ ಮೊದಲ ಬಾರಿಗೆ ಅಮೆರಿಕಾದಲ್ಲಿ ಇಷ್ಟು ಸಂಖ್ಯೆಯ ಗರ್ಭಪಾತ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಲಾಗಿದೆ. 2013ರಲ್ಲಿ 958,700 ಹಾಗೂ 2014 ರಲ್ಲಿ 926,200 ಗರ್ಭಪಾತ ವಾಗಿರುವ ವರದಿಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಖ್ಯೆಯಲ್ಲಿ ಗರ್ಭಪಾತದ ಪ್ರಮಾಣ ತಗ್ಗಲಿದೆ ಎಂದು ಹೇಳಲಾಗಿದೆ.
15 ರಿಂದ 44 ವರ್ಷದೊಳಗಿನ 1,000 ಮಹಿಳೆಯರಲ್ಲಿ 14,6 ರಷ್ಟು ಪ್ರಮಾಣದಲ್ಲಿ ಗರ್ಭಪಾತ ಕಡಿಮೆಯಾಗಿದೆ. ಗರ್ಭಪಾತ ಸಂಖ್ಯೆ ಈ ಪ್ರಮಾಣದಲ್ಲಿ ಕುಸಿಯಲು ಕಾರಣ ಏನು ಎಂಬುದರ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ.
1973 ರಲ್ಲಿ ಅಮೆರಿಕಾ ಸಂವಿಧಾನ ಮಹಿಳೆಗೆ ತನ್ನನ್ನು ರಕ್ಷಿಸಿಕೊಳ್ಳಲು ಗರ್ಭಪಾತ ಮಾಡಿಸಿಕೊಳ್ಳುವ ಆಯ್ಕೆಗೆ ಅವಕಾಶ ನೀಡಿತ್ತು. ಇತ್ತೀಚೆಗೆ ಗರ್ಭಪಾತ ಮಾಡಿಸಿಕೊಳ್ಳುವ ಸಂಬಂಧ ನಿರಂತರವಾಗಿ ಜಾರಿಗೆ ತಂದ ನೀತಿ ನಿಯಮಗಳು ಗರ್ಭಪಾತ ಪ್ರಮಾಣ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ.
ಗರ್ಭಪಾತ ಮಾಡಿಸಿಕೊಳ್ಳುತ್ತಿದ್ದ ಹತ್ತಿರದಲ್ಲಿದ್ದ ಕ್ಲಿನಿಕ್ ಗಳು ಮುಚ್ಚಿದ ಕಾರಣ ಮಹಿಳೆಯರು ದೂರ ಪ್ರದೇಶಗಳಿಗೆ ಪ್ರಯಾಣ ಮಾಡಬೇಕಾಗಿದೆ. ಕಡಿಮೆ ಆದಾಯವಿರುವ ಕಾರಣ ಶೇ.75 ರಷ್ಟು ಮಹಿಳೆಯರು ಗರ್ಭಪಾತ ಮಾಡಿಸಿಕೊಳ್ಳುತ್ತಾರೆ. 2/3 ರಷ್ಟು ಭಾಗದ ಮಹಿಳೆಯರು ಮಾತ್ರ ಈಗಾಗಲೇ ತಾಯಿಯಾಗಿದ್ದಾರೆ ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ.
ಕೆಲಸ ಮಾಡುವ ಮಹಿಳೆಯರಿಗೆ ಸಮಯ ಹೊಂದಿಸುವುದು, ಮಕ್ಕಳ ಬಗ್ಗೆ ಕೇರ್ ತೆಗೆದುಕೊಳ್ಳಲು ಸಮಯದ ಅಭಾವವಿರುವುದರಿಂದ ಹೆಚ್ಚಿನ ಮಹಿಳೆಯರು ಗರ್ಭಪಾತ ಮಾಡಿಸಿಕೊಳ್ಳಲು ಮುಂದಾಗುತ್ತಾರೆ, ಆದರೆ ಇತ್ತೀಚೆಗೆ ಮಹಿಳೆಯರು ಸುರಕ್ಷತಾ ಕ್ರಮಗಳನ್ನು ಹೆಚ್ಚು ಅನುಸರಿಸುತ್ತಿರುವುದರಿಂದ ಗರ್ಭಪಾತ ಪ್ರಮಾಣದಲ್ಲಿ ಇಳಿಕೆಯಾಗಲು ಕಾರಣ ಎಂದು ಸಂಶೋಧನಾ ಮುಖ್ಯಸ್ಥೆ ಜೊನ್ಸ್ ಹೇಳಿದ್ದಾರೆ.
2014 ರಲ್ಲಿ ಯನೈಟೆಡ್ ಸ್ಟೇಟ್ಸ್ ನ ಎಲ್ಲಾ ದೇಶಗಳಲ್ಲೂ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಳ್ಳಲಾಗಿತ್ತು. ಅನಪೇಕ್ಷಿತ ಗರ್ಭಧಾರಣೆಯಲ್ಲಿ ಇಳಿಕೆಯಾಗಿರುವುದು ಕೂಡ ಗರ್ಭಪಾತ ಪ್ರಮಾಣ ತಗ್ಗಲು ಕಾರಣ ಎಂದು ಸಂಶೋಧನೆ ತಿಳಿಸಿದೆ.

Comments are closed.