ರಾಷ್ಟ್ರೀಯ

ಬ್ಯಾಂಕುಗಳಿಗೆ ಮರಳಿ ಜಮೆಯಾದ ಹಣದ ನಿರ್ದಿಷ್ಟ ಅಂಕಿಅಂಶ ತಿಳಿದಿಲ್ಲ: ಉರ್ಜಿತ್‌ ಪಟೇಲ್‌

Pinterest LinkedIn Tumblr


ನವದೆಹಲಿ: ‘ನೋಟು ರದ್ದತಿ ನಂತರ ಬ್ಯಾಂಕುಗಳಲ್ಲಿ ಒಟ್ಟು ಎಷ್ಟು ಹಣ ಮರಳಿ ಜಮಾಗೊಂಡಿದೆ ಎಂಬುದರ ಬಗ್ಗೆ ನಿರ್ದಿಷ್ಟ ಅಂಕಿಅಂಶ ತಿಳಿದಿಲ್ಲ’ ಎಂದು ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್‌ ಸಂಸದೀಯ ಸಮಿತಿಗೆ ಹೇಳಿದ್ದಾರೆ.

‘ಕಳೆದ ವರ್ಷದ ಜನವರಿಯಲ್ಲಿ ನೋಟು ರದ್ದತಿ ಕುರಿತು ಮಾತುಕತೆ ನಡೆದಿತ್ತು. ಈ ಕುರಿತು ಸೆಂಟ್ರಲ್‌ ಬ್ಯಾಂಕಿಗೆ ಗರಿಷ್ಠ ಮುಖಬೆಲೆಯ ನೋಟು ರದ್ದುಗೊಳಿಸುವಂತೆ ನವಂಬರ್‌ 7 ರಂದು ಸರ್ಕಾರ ತಿಳಿಸಿತ್ತು’ ಎಂದು ಸಮಿತಿಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.

ಕಾಂಗ್ರೆಸಿನ ವೀರಪ್ಪ ಮೊಯಲಿ ನೇತೃತ್ವದ ಹಣಕಾಸು ವಿಭಾಗದ ಸಂಸದೀಯ ಸ್ಥಾಯಿ ಸಮಿತಿಯು ಕಳೆದ ಶುಕ್ರವಾರದಂದು ಉರ್ಜಿತ್‌ ಪಟೇಲ್‌ಗೆ ಉತ್ತರಿಸುವಂತೆ ಪ್ರಶ್ನೆ ಕೇಳಿತ್ತು. ಶೀಘ್ರದಲ್ಲೆ ಕೆ.ವಿ.ಥಾಮಸ್‌ ನೇತೃತ್ವದ ಮತ್ತೊಂದು ಸಮಿತಿಗೆ ಪಟೇಲ್‌ ಉತ್ತರಿಸಬೇಕಾಗಿದೆ.

‘ಅಗತ್ಯ ಬಿದ್ದರೆ ಪ್ರಧಾನಿ ಮೋದಿಯವರಿಗೂ ನೋಟು ರದ್ದತಿ ವಿಷಯದ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಲು ಸಮನ್ಸ್‌ ಜಾರಿ ಮಾಡಲಾಗುವುದು’ ಎಂದು ಥಾಮಸ್‌ ಹೇಳಿದ್ದಾರೆ.

ಈ ಹೇಳಿಕೆಗೆ ಸಮಿತಿಯಲ್ಲಿರುವ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Comments are closed.