ಅಂತರಾಷ್ಟ್ರೀಯ

ಬ್ರಿಟನ್ ಸರ್ಕಾರದಿಂದ ನಕಲು ಮಾಡಲಾಗದ 12 ಕೋನದ ನಾಣ್ಯ

Pinterest LinkedIn Tumblr

coin
ಲಂಡನ್(ಜ.04): ನಕಲು ಮಾಡಲು ಸಾಧ್ಯವಾಗದಂತಹ 12 ಕೋನದ ಒಂದು ಪೌಂಡ್‌ ಮೌಲ್ಯದ ನಾಣ್ಯಗಳನ್ನು ಬ್ರಿಟನ್ ಸರ್ಕಾರ ಮಾರ್ಚ್‌’ನಲ್ಲಿ ಚಲಾವಣೆಗೆ ತರಲಿದೆ.
ಈ ಹೊಸ ನಾಣ್ಯಗಳು ಈಗ ಚಲಾವಣೆಯಲ್ಲಿರುವ ಒಂದು ಪೌಂಡ್‌ ನಾಣ್ಯಗಳಿಗಿಂತ ಹೆಚ್ಚು ತೆಳು, ಹಗುರ ಮತ್ತು ಅಗಲವಾಗಿರಲಿವೆ. ನಕಲಿ ನಾಣ್ಯಗಳ ಹಾವಳಿಯನ್ನು ತಡೆಯುವ ಉದ್ದೇಶದಿಂದ 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹೊಸ ಸ್ವರೂಪದ ನಾಣ್ಯಗಳನ್ನು ಪರಿಚಯಿಸಲಾಗುತ್ತಿದೆ.
ಮಾರ್ಚ್‌ 28 ರಿಂದ ಹೊಸ ನಾಣ್ಯಗಳು ಚಲಾವಣೆಗೆ ಬರಲಿದ್ದು, ಪ್ರಸ್ತುತ ಚಾಲ್ತಿಯಲ್ಲಿರುವ ಒಂದು ಪೌಂಡ್‌’ನ ನಾಣ್ಯಗಳು ಅಕ್ಟೋಬರ್‌’ವರೆಗೂ ಮಾನ್ಯವಾಗಿರುತ್ತವೆ. ಅದಕ್ಕೂ ಮುನ್ನ ಜನರು ತಮ್ಮ ಬಳಿ ಇರುವ ಹಳೆಯ ನಾಣ್ಯಗಳನ್ನು ಚಲಾವಣೆ ಮಾಡಬೇಕು, ಇಲ್ಲವೇ ಬ್ಯಾಂಕ್‌’ಗೆ ನೀಡಬೇಕು ಎಂದು ಸರ್ಕಾರ ಸೂಚಿಸಿದೆ

Comments are closed.