ರಾಷ್ಟ್ರೀಯ

ನೋಟು ನಿಷೇಧ: ಆರ್‌ಬಿಐ ಎದುರು ಮಹಿಳೆಯಿಂದ ನಗ್ನ ಪ್ರತಿಭಟನೆ

Pinterest LinkedIn Tumblr

nagna
ನವದೆಹಲಿ: ನೋಟು ನಿಷೇಧದಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಬಂದ ಮಹಿಳೆಯೊಬ್ಬಳು, ಹಣ ಬದಲಾಯಿಸಲು ವಿಫಲವಾದಾಗ ಆಕ್ರೋಶಗೊಂಡು ಟಾಪ್‌ಲೆಸ್ ಆದ ಘಟನೆ ವರದಿಯಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್‌ನ ಗೇಟ್ ಬಳಿ ತನ್ನ ಪುಟ್ಟ ಮಗುವನ್ನು ಎತ್ತಿಕೊಂಡು ಬಂದಿದ್ದ ಮಹಿಳೆ, ಕಷ್ಟಪಟ್ಟು ದುಡಿದ ಹಣವಾಗಿದ್ದು ಬದಲಾಯಿಸಿಕೊಳ್ಳಲು ಅವಕಾಶ ನೀಡಿ ಎಂದು ಗೋಗೆರೆದು ಕಣ್ಣೀರು ಹಾಕಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಆರ್‌ಬಿಐ ಭದ್ರತಾ ಸಿಬ್ಬಂದಿ ಒತ್ತಾಯಪೂರ್ವಕವಾಗಿ ಆಕೆಯನ್ನು ಗೇಟ್ನಿಂದ ಹೊರಗೆ ಎಳೆದುಹಾಕಲು ಪ್ರಯತ್ನಿಸಿದಾಗ ಕೋಪಗೊಂಡ ಮಹಿಳೆ ತನ್ನ ಬಟ್ಟೆಗಳನ್ನು ಬಿಚ್ಚಿ ನಗ್ನವಾಗಿರುವುದು ನೋಡಿ ಭಧ್ರತಾ ಸಿಬ್ಬಂದಿ ಮತ್ತು ದಾರಿಹೋಕರು ಆಘಾತಗೊಂಡಿದ್ದಾರೆ.

ಆರ್‌‍ಬಿಐ ಭದ್ರತಾ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಕರೆ ಮಾಡಿದಾಗ, ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ಕರೆದುಕೊಂಡು ಹೋಗಿ ಆಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸಂಸತ್ತಿನಿಂದ ಕೂಗಳತೆಯಲ್ಲಿರುವ ಆರ್‌ಬಿಐ ಬ್ಯಾಂಕ್‌ನಲ್ಲಿ ಮಹಿಳೆಯನ್ನು ಅಪಮಾನಿಸಿರುವುದು ಮಾತ್ರ ವಿಷಾದಕರ ಸಂಗತಿಯಾಗಿದೆ ಎಂದು ಅಲ್ಲಿ ನೆರೆದಿದ್ದ ಜನರು ಮೋದಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಮಾರ್ಚ್ 31 ರ ವರೆಗೆ ಆರ್‌ಬಿಐನಲ್ಲಿ ಹಳೆಯ ನೋಟುಗಳನ್ನು ಬದಲಿಸಬಹುದು ಎಂದು ದೇಶದ ಜನತೆಗೆ ಭರವಸೆ ನೀಡಿದ್ದರು. ಇದೀಗ ಭಾರತೀಯ ರಿಸರ್ವ್ ಬ್ಯಾಂಕ್‌ಗಳು ಹಳೆಯ ನೋಟುಗಳ ಹಣ ಸ್ವೀಕರಿಸದಿರುವುದು ಜನತೆಯಲ್ಲಿ ಮೋದಿಯವರ ಬಗ್ಗೆ ಭರವಸೆ ಕಳೆದುಹೋದಂತಾಗಿದೆ.

Comments are closed.