ರಾಷ್ಟ್ರೀಯ

ನೋಟು ನಿಷೇಧದ ವಿರುದ್ಧ ಪೊಲೀಸ್ ಠಾಣೆಗಳ ಎದುರು ಪ್ರತಿಭಟನೆ: ಪ್ರಕಾಶ್ ಅಂಬೇಡ್ಕರ್

Pinterest LinkedIn Tumblr

prakash-ambedkar
ನವದೆಹಲಿ: ನೋಟು ಹಿಂಪಡೆತ ನಿರ್ಧಾರದಿಂದ ಉಂಟಾಗಿರುವ ದುಷ್ಪರಿಣಾಮಗಳ ವಿರುದ್ಧ ಮಹಾರಾಷ್ಟ್ರದಲ್ಲಿ ಪೊಲೀಸ್ ಠಾಣೆಗಳ ಎದುರು ಗುರುವಾರದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಭರಿಪ್ ಬಹುಜನ ಮಹಾಸಂಘ ಪಕ್ಷದ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಡಾ. ಬಿ ಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್, ಈ ಪ್ರತಿಭಟನೆಯ ಉದ್ದೇಶ, ಬಡ ಕಾರ್ಮಿಕ ವರ್ಗ ತಮ್ಮ ದಿನಗೂಲಿ ಮತ್ತು ದಿನನಿತ್ಯದ ಆಹಾರ ಗಳಿಸಿಕೊಳ್ಳಲು ಅಗತ್ಯ ಅವಕಾಶಗಳನ್ನು ಸೃಷ್ಟಿಸುವುದಕ್ಕೆ ಒತ್ತಡ ಹೇರಲು ಎಂದಿದ್ದಾರೆ. ನವೆಂಬರ್ ೮ ರ ನೋಟು ಹಿಂಪಡೆತ ನಿರ್ಧಾರದಿಂದ ಉಂಟಾಗಿರುವ ದುಷ್ಪರಿಣಾಮಗಳು ಈ ಬಡ ಕಾರ್ಮಿಕ ವರ್ಗಕ್ಕೆ ದೊಡ್ಡ ಹೊಡೆತ ನೀಡಿದ್ದು, ಅವರು ತಮ್ಮ ಕನಿಷ್ಠ ಅಗತ್ಯ ಬೇಡಿಕೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
“ನೋಟು ಹಿಂಪಡೆತದ ನಂತರ, ಕಾರ್ಮಿಕರು, ಬಡ ಜನ ಕೆಲಸಗಳನ್ನು ಕಳೆದುಕೊಂಡಿದ್ದಾರೆ. ಅವರಿಗೆ ಊಟ ಮಾಡಲು ಸಹ ಅಗತ್ಯವಾದ ಹಣವಿಲ್ಲ. ಆದುದರಿಂದ ಸರ್ಕಾರ ಅವರಿಗೆ ರೊಟ್ಟಿ ಅಥವಾ ನೋಟು ನೀಡಬೇಕೆಂಬುದು ನಮ್ಮ ಆಗ್ರಹ.
“ನಮ್ಮ ಬೇಡಿಕೆಯನ್ನು ಗಮನಕ್ಕೆ ತರಲು, ಪೊಲೀಸ್ ಆವರಣಗಳಲ್ಲಿ ಪ್ರತಿಭಟನೆ ನಡೆಸಲು ನಮ್ಮ ಕಾರ್ಯಕರ್ತರಿಗೆ ಸೂಚಿಸಿದ್ದೇವೆ” ಎಂದಿರುವ ಅಂಬೇಡ್ಕರ್, ಇದಕ್ಕಾಗಿ ಬೃಹತ್ ರ್ಯಾಲಿ ನಡೆಸುವ ಯಾವುದೇ ಯೋಜನೆಗಳಿಲ್ಲ ಎಂದಿದ್ದಾರೆ.
ಮಹಾರಾಷ್ಟ್ರದ ಅಕೊಲಾ ಮತ್ತು ವಾಸಿಂ ಜಿಲ್ಲೆಗಳಲ್ಲಿ ಅಂಬೇಡ್ಕರ್ ಅವರ ಪಕ್ಷ ಪ್ರಾಬಲ್ಯ ಹೊಂದಿದೆ.

Comments are closed.