ರಾಷ್ಟ್ರೀಯ

ಏರ್‌ಟೆಲ್‌ 4ಜಿ ಗ್ರಾಹಕರಿಗೆ ಪ್ರತಿ ತಿಂಗಳು 3ಜಿಬಿ ಉಚಿತ ಡಾಟಾ

Pinterest LinkedIn Tumblr

airtel
ನವದೆಹಲಿ: ಅನಿಯಮಿತ ಸೇವೆ ನೀಡುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿರುವ ಜಿಯೋಗೆ ಸೆಡ್ಡು ಹೊಡೆಯಲು ದೇಶದ ಅತಿ ದೊಡ್ಡ ಮೊಬೈಲ್ ಸೇವಾ ಕಂಪನಿ ಏರ್‌ಟೆಲ್‌ ಇದೀಗ ತನ್ನ ಗ್ರಾಹಕರಿಗೆ ಪ್ರತಿ ತಿಂಗಳು 3ಜಿಬಿ ಹೆಚ್ಚುವರಿಯಾಗಿ ಡಾಟಾವನ್ನು ಘೋಷಿಸಿದೆ.
ಒಂದು ವರ್ಷ ಕಾಲ ತನ್ನ 4ಜಿ ಗ್ರಾಹಕರಿಗೆ ಏರ್‌ಟೆಲ್‌ ಉಚಿತ 3ಜಿಬಿ ಡಾಟಾವನ್ನು ನೀಡಲಿದೆ. ಈ ಉಚಿತ ಆಫರ್ ಇಂದಿನಿಂದಲೇ ಆರಂಭವಾಗಲಿದೆ. ಪ್ರತಿ ತಿಂಗಳ ಡಾಟಾ ಪ್ಲ್ಯಾನ್ ಹಾಕಿಸಿಕೊಂಡರೆ ಮಾತ್ರ ಈ ಉಚಿತ ಸೇವೆ ಸಿಗಲಿದೆ. ಗ್ರಾಹಕರು ತಿಂಗಳಿಗೆ 345 ರುಪಾಯಿ ರಿಚಾರ್ಚ್ ಮಾಡಿಸಿದರೆ 1 ಜಿಬಿ ಡಾಟಾ ಪಡೆಯುತ್ತಾರೆ. ಈ ಪ್ಲ್ಯಾನ್ ಹಾಕಿಸಿಕೊಂಡರೆ 1ಜಿಬಿ ಜತೆ 3ಜಿಬಿ ಡಾಟಾ ಉಚಿತವಾಗಿ ಸಿಗಲಿದೆ.
ಇದರ ಜತೆಗೆ ಸ್ಥಳೀಯ ಹಾಗೂ ಎಸ್‌ಟಿಡಿ ಉಚಿತ ಕರೆಗಳು ಸಿಗಲಿದ್ದು ಇದರ ವ್ಯಾಲಿಡಿಟಿ 28 ದಿನಗಳವರೆಗೆ ಇರಲಿದೆ. ಈ ಪ್ಲ್ಯಾನ್ ಅನ್ನು ಮೊದಲ ಬಾರಿ ರಿಚಾರ್ಜ್ ಮಾಡಿಸಿಕೊಳ್ಳುವವರು myairtel App ಮೂಲಕವೇ ಮಾಡಿಸಿಕೊಳ್ಳಬೇಕು. ಈ ಉಚಿತ ಸೇವೆ ಡಿಸೆಂಬರ್ 31ರವರೆಗೆ ಇರಲಿದೆ.

Comments are closed.